Saturday, October 1, 2022
Powertv Logo
Homeರಾಜ್ಯಅಮೂಲ್ಯ, ಆರ್ದ್ರಾ ವಿಚಾರಣೆಗೆ ವಿಶೇಷ ತಂಡ

ಅಮೂಲ್ಯ, ಆರ್ದ್ರಾ ವಿಚಾರಣೆಗೆ ವಿಶೇಷ ತಂಡ

ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಹಾಗೂ ಫ್ರೀ ಕಾಶ್ಮೀರ ಬೋರ್ಡ್ ಪ್ರದರ್ಶಿಸಿದ  ಆರ್ದ್ರಾ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ವಿಶೇಷ ತನಿಖಾ ತಂಡ ರಚಿಸಿದ್ದಾರೆ. 

ಚಿಕ್ಕಪೇಟೆ ಎಸಿಪಿ ನೇತೃತ್ವದ ಈ ತಂಡದಲ್ಲಿ ನಾಲ್ವರು ಇನ್ಸ್​ಪೆಕ್ಟರ್​ಗಳಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಅಮೂಲ್ಯ ಹಾಗೂ ಆರ್ದ್ರಾ ಯಾಕೆ ಈ ರೀತಿಯ ದೇಶದ್ರೋಹದ ಕೆಲಸಗಳನ್ನು ಮಾಡುತ್ತಿದ್ದಾರೆ? ಇವರು ಈ ರೀತಿಯ ಕೆಲಸಗಳನ್ನು ಮಾಡಲು ಕುಮ್ಮಕ್ಕು ನೀಡುತ್ತಿರುವುದು ಯಾರು? ಇನ್ನು ಇವರೊಂದಿಗೆ ಯಾರೆಲ್ಲಾ ಇದ್ದಾರೆ ಎಂಬಿತ್ಯಾದಿ ವಿಚಾರಗಳ ಕುರಿತು ತನಿಖೆ ನಡೆಯಲಿದೆ. 

LEAVE A REPLY

Please enter your comment!
Please enter your name here

- Advertisment -

Most Popular

Recent Comments