Home ರಾಜ್ಯ ‘ರಾಜೀನಾಮೆ ಹಿಂದಿನ ಕಾರಣ ಬಿಚ್ಚಿಟ್ಟ ಸಿಂಗಂ’

‘ರಾಜೀನಾಮೆ ಹಿಂದಿನ ಕಾರಣ ಬಿಚ್ಚಿಟ್ಟ ಸಿಂಗಂ’

ಚಿಕ್ಕಮಗಳೂರು: 10 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಆಮೇಲೆ ಡಿಐಜಿ, ಐಜಿ ಆಗಿ ಎಸಿ ರೂಮಲ್ಲಿ ಕೂತು ಕೆಲಸ ಮಾಡುಲು ಆಸಕ್ತಿ ಇಲ್ಲ ಎಂದಾಗ, ಸಿದ್ಧಾರ್ಥ್ ಅಣ್ಣಾ ಮಾತ್ರ ಧೈರ್ಯವಾಗಿ ಹೇಳಿದ್ದು, ರಾಜೀನಾಮೆ ಕೊಡಿ ನಾನಿದ್ದೇನೆ ಎಂದಿದ್ದರು. ನನ್ನ ರಾಜೀನಾಮೆಯನ್ನ ನಾವಿಬ್ಬರೂ ಸೇರಿ ಡಿಸೈಡ್ ಮಾಡಿದ್ದು, ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ. ಅವರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಹೆಗ್ಡೆ ಅವರ ಪುತ್ಥಳಿ ನಿರ್ಮಾಣದ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಇದೇ ವೇಳೆ, ಮಾತನಾಡಿದ ಅವರು, ನಾನು ಸಿದ್ಧಾರ್ಥ್ ಹೆಗ್ಡೆ ಅವರ ಕೆಫೆ ಡೇ ಚೇಂಬರ್ ರೂಂನಲ್ಲಿ ಕೂತು ಮೂರೂವರೆ ಗಂಟೆ ಮಾತನಾಡಿದ್ದೇವು. ಎರಡು ಜನ ಕಾರ್ ಡೋರ್ ಓಪನ್ ಮಾಡಿ ಬಿಡುತ್ತಾರೆ. ನಾಲ್ಕು ಜನ ಸೆಲ್ಯೂಟ್ ಮಾಡುತ್ತಾರೆ. ನನಗೆ ಅದರಿಂದ ಸಂತೋಷವಿಲ್ಲ. ಕೃಷಿ ಮಾಡಬೇಕು. ಊರಿಗೆ ಹೋಗಬೇಕು. ಸಾಧಾರಣ ಮನುಷ್ಯನಂತೆ ಬದುಕಬೇಕು ಹಾಗೂ ಸಾಮಾನ್ಯ ಮನುಷ್ಯನ ಜೀವನವನ್ನ ಬದಲಾವಣೆ ಮಾಡಬೇಕು ಎಂದು ಆಸೆ ಸರ್ ಎಂದು ಅವರಿಗೆ ಹೇಳಿದ್ದೆ. ಆಗ ಅವರು, ಧೈರ್ಯವಾಗಿ ಹೇಳಿದ್ದರು. ರಾಜೀನಾಮೆ ಕೊಡಿ ನಾನಿದ್ದೇನೆ ಎಂದಿದ್ದರು ಎಂದು ಸಿದ್ಧಾರ್ಥ್ ಹೆಗ್ಡೆಯವರನ್ನ ನೆನಪಿಸಿಕೊಂಡರು.

ಯಾವ ಡೇಟ್‍ನಲ್ಲಿ ಪೇಪರ್ ಟೈಪ್ ಮಾಡಬೇಕು ಎಂದು ನಾವಿಬ್ಬರು ಡಿಸೈಡಿ ಮಾಡಿದ್ದೇವು ಎಂದರು. ರಾಜೀನಾಮೆ ಕೊಟ್ಟ ಬಳಿಕ ಬಾಂಬೆಯಿಂದ ಫೋನ್ ಮಾಡಿದ್ದರು. ಬಹಳ ಕಷ್ಟದ ಕೆಲಸ ಯಾರೂ ಮಾಡಲ್ಲ. ಜನ ನಿಮಗೆ ಮೂರ್ಖ ಎನ್ನಬಹುದು, ಫೂಲ್ ಎನ್ನಬಹುದು. ಆದರೆ, ನನಗೆ ನಿಮ್ಮ ಉದ್ದೇಶ ಏನೆಂದು ಗೊತ್ತು ಎಂದಿದ್ದರು ಎಂದು ಅವರನ್ನ ಸ್ಮರಿಸಿದರು. ನಾನು ಏನು ಮಾಡಿದ್ರು ಅವರು ಮೇಲಿಂದ ನೋಡುತ್ತಿದ್ದಾರೆ. ಅವರು ಯಾವಾಗಲು ನನ್ನೊಂದಿಗೆ ಇರುತ್ತಾರೆ. ಅವರು ನನಗೆ ಗೈಡ್ ಮಾಡಿದ್ದರು. ಅವರು ನನ್ನೊಂದಿಗೆ ನಿಂತು ಗೈಡ್ ಮಾಡುತ್ತಿರುತ್ತಾರೆ ಎಂದರು.

– ಸಚಿನ್ ಶೆಟ್ಟಿ ಚಿಕ್ಕಮಗಳೂರು

LEAVE A REPLY

Please enter your comment!
Please enter your name here

- Advertisment -

Most Popular

‘ಘಟನೆಯ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡಲಿ ಪ್ರಸನ್ನ್ ಕುಮಾರ್ ಆಗ್ರಹ’

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಲ್ಲು ಗಣಿಗಾರಿಕೆ ಸ್ಫೋಟಕದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಶಿವಮೊಗ್ಗದ ಮಾಜಿ ಶಾಸಕ ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ. ಒಂದು ಲೋಡ್ ಸ್ಪೋಟಕ ವಸ್ತುಗಳು ನಗರಕ್ಕೆ ಬಂದಿದ್ದು ಹೇಗೆ. ನಗರಕ್ಕೆ ಬರುವ...

ಉಸಿರು ಕಟ್ಟಿಸುವ ವಾತಾವರಣವೇ ಪಕ್ಷ ಬಿಡಲು ಕಾರಣ: ರಾಜಣ್ಣ ಕೊರವಿ

ಹುಬ್ಬಳ್ಳಿ: ಜೆಡಿಎಸ್ ಪಕ್ಷದಲ್ಲಿನ ಉಸಿರು ‌ಕಟ್ಟಿಸಿವ ವಾತಾವರಣದಿಂದ ಬೆಸತ್ತು ನಾನು ಹಾಗೂ ನನ್ನ ಬೆಂಬಲಿಗರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದೇವೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ‌ ರಾಜಣ್ಣ ಕೊರವಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ...

‘ಉದ್ದವ್ ಠಾಕ್ರೆ ವಿರುದ್ಧ ಸಿಡಿದೆದ್ದ ಕರವೇ‌ ಕಾರ್ಯಕರ್ತರು’

ಹುಬ್ಬಳ್ಳಿ: ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಸಿಎಂ ಉದ್ದವ ಠಾಕ್ರೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಶಿವಸೇನಾ ವಿರುದ್ದ ಸಿಡಿದೆದ್ದ ಕರವೇ ಯುವಸೇನಾ ಕಾರ್ಯಕರ್ತರು ಕರವೇ...

‘ಮೃತ ಕುಟುಂಬಗಳಿಗೆ ರಾಷ್ಟ್ರಪತಿ ಸಾಂತ್ವನ’

ಶಿವಮೊಗ್ಗ: ಕಲ್ಲು ಕ್ವಾರಿ ದುರಂತಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಧಿಗ್ಬ್ರಮೆಗೊಂಡಿದ್ದಾರೆ. ಸ್ಪೋಟದಿಂದ ಜೀವ ಹಾನಿಯಾಗಿರೋದು ನೋವಿನ ಸಂಗತಿ. ಇಂತಹದೊಂದು ದುರಾದೃಷ್ಟಕರ ಘಟನೆ ನೆಡೆಯಬಾರದಿತ್ತು. ಮೃತರ ಕುಟುಂಬಗಳಿಗೆ ರಾಷ್ಟ್ರಪತಿ ಸಾಂತ್ವನ. ಘಟನೆಯಲ್ಲಿ ಗಾಯಗೊಂಡವರು ಶೀಘ್ರವೇ...

Recent Comments