Saturday, October 1, 2022
Powertv Logo
Homeಈ ಕ್ಷಣಗಾಯಕ ಸಿದ್ ಶ್ರೀರಾಮ್ ಕೈ ಹಿಡಿಯಿತು ಅದೃಷ್ಟ..!

ಗಾಯಕ ಸಿದ್ ಶ್ರೀರಾಮ್ ಕೈ ಹಿಡಿಯಿತು ಅದೃಷ್ಟ..!

ಗಾಯಕ ಸಿದ್ ಶ್ರೀರಾಮ್ ಯಾರಿಗೆ ಗೊತ್ತಿಲ್ಲ ಹೇಳಿ. ಸೌತ್ ಸಿನಿ ಲೋಕದ ಫೇಮಸ್​ ಸಿಂಗರ್​. ತಮಿಳು, ತೆಲುಗು, ಮಲೆಯಾಳಂ ಭಾಷೆಗಳಷ್ಟೇ ಅಲ್ಲದೆ, ಕನ್ನಡದ ಕೆಲ ಸಿನಿಮಾಗಳಲ್ಲೂ ಹಾಡಿ ಕನ್ನಡಿಗರ ಮನಗೆದ್ದಿದ್ದಾರೆ. ಖ್ಯಾತ ಗಾಯಕರಾಗಿ ಗುರುತಿಸಿಕೊಂಡಿರೋ ಸಿದ್ ಶ್ರೀರಾಮ್ ಇದೀಗ ಸಿನಿಮಾ ನಾಯಕರಾಗಲು ರೆಡಿಯಾಗ್ತಿದ್ದಾರೆ.
ಸಿದ್ ಶ್ರೀರಾಮ್ ಸೌತ್ ಸಿನಿ ಲೋಕದ ಖ್ಯಾತ ಗಾಯಕ. ಬಹುಶಃ ಇವರ ಹಾಡುಗಳನ್ನು ಕೇಳದವರೇ ಇಲ್ಲ ಅನ್ನಬಹುದು. ಇವರ ಧ್ವನಿ ಹಾಗೂ ಇವರ ಕಂಠಸಿರಿಯಲ್ಲಿ ಮೂಡಿಬಂದಿರೋ ಹಾಡುಗಳು ಅಷ್ಟು ಜನಮನ್ನಣೆ ಪಡೆದಿವೆ. ತಮಿಳು, ತೆಲುಗು, ಮಲೆಯಾಳಂನಲ್ಲಿ ಬಹುತೇಕ ಸಿನಿಮಾಗಳಿಗೆ ಸಿದ್ ಶ್ರೀರಾಮ್ ಸಾಂಗ್ಸ್ ಹಾಡಿದ್ದಾರೆ.

ಅಷ್ಟೇ ಅಲ್ಲದೆ ಕನ್ನಡ ಹಲವು ಸಿನಿಮಾಗಳ ಹಾಡುಗಳೂ ಸಹ ಅವರ ಸೊಗಸಾದ ಧ್ವನಿಯಲ್ಲಿ ಮೂಡಿಬಂದಿವೆ. ಡಿಯರ್ ಕಾಮ್ರೇಡ್, ಟಾಮ್ ಅಂಡ್ ಜೆರ್ರಿ, ಭಜರಂಗಿ-2, ಪುಷ್ಪ ಚಿತ್ರದ ಕನ್ನಡ ವರ್ಷನ್ ಹಾಗೂ ಸಖತ್ ಸಿನಿಮಾದ ಕೆಲ ಹಾಡುಗಳನ್ನು ಸಿದ್ ಶ್ರೀರಾಮ್ ಹಾಡಿದ್ದಾರೆ. ಅದ್ರಲ್ಲೂ ಇತ್ತೀಚೆಗೆ ತೆರೆಕಂಡ ಟಾಮ್ ಅಂಡ್ ಜೆರ್ರಿ ಸಿನಿಮಾದ ಹಾಯಾಗಿದೆ ಹಾಡಂತೂ ಟ್ರೆಂಡ್ ಸೆಟ್ ಮಾಡಿತ್ತು. ಕನ್ನಡದಲ್ಲಿ ಸಿದ್ ಶ್ರೀರಾಮ್ ಹಾಡಿದ ಸಾಕಷ್ಟು ಸಾಂಗ್ಸ್ ಸೂಪರ್ ಹಿಟ್ ಆಗಿವೆ. ಸಿದ್ ಶ್ರೀರಾಮ್ ಅವ್ರ ವಾಯ್ಸ್​ಗೆ ಕನ್ನಡಿಗರೂ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಹೀಗೆ ತಮ್ಮ ಸ್ವೀಟ್ ವಾಯ್ಸ್​ನಿಂದ ಸಿನಿಪ್ರಿಯರ ದಿಲ್ ದೋಚಿರೋ ಸಿದ್​ ಶ್ರೀರಾಮ್ ಇದೀಗ ನಾಯಕರಾಗಲು ಸಜ್ಜಾಗ್ತಿದ್ದಾರೆ. ಹೌದು, ಸಿದ್ ಶ್ರೀರಾಮ್ ಖ್ಯಾತ ನಿರ್ದೇಶಕ ಮಣಿರತ್ನಂ ಅವ್ರ ಸಿನಿಮಾದಲ್ಲಿ ನಾಯಕರಾಗಿ ನಟಿಸೋದು ಫೈನಲ್ ಆಗಿದೆ. ಆದ್ರೆ ಈ ಚಿತ್ರವನ್ನು ಮಣಿರತ್ನಂ ಅವ್ರು ನಿರ್ದೇಶನ ಮಾಡ್ತಾರಾ ಅಥವಾ ನಿರ್ಮಾಣ ಮಾಡ್ತಾರಾ ಅನ್ನೋದು ಕನ್ಫರ್ಮ್ ಆಗಿಲ್ಲ.

ಗಾಯಕರಾಗಿದ್ದ ಸಿದ್ ಶ್ರೀರಾಮ್​​ ಅವ್ರನ್ನು ಈ ಹಿಂದೆ ಮಣಿರತ್ನಂ ಅವ್ರೇ ಮ್ಯೂಸಿಕ್ ಡೈರೆಕ್ಟರ್ ಮಾಡಿದ್ರು. ಇದೀಗ ಅವರದೇ ಸಿನಿಮಾದಲ್ಲಿ ನಾಯಕರಾಗುವ ಅವಕಾಶವೂ ಸಿಗ್ತಿರೋದು ವಿಶೇಷ. ಸದ್ಯ ಮಣಿರತ್ನಂ ಅವ್ರು ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆ ಚಿತ್ರಗಳು ಮುಗಿದ ನಂತ್ರ ಸಿದ್​ ಶ್ರೀರಾಮ್ ನಟನೆಯ ಚಿತ್ರದತ್ತ ಗಮನ ಹರಿಸಲಿದ್ದಾರೆ. ಇನ್ನು ಸಿನಿಮಾಗೆ ನಾಯಕಿ ಯಾರು, ಇನ್ಯಾವ ಕಲಾವಿದರು ಇರಲಿದ್ದಾರೆ ಅನ್ನೋದು ಇನ್ನಷ್ಟೇ ರಿವೀಲ್ ಆಗ್ಬೇಕಿದೆ.

ಒಟ್ಟಾರೆ ತಮ್ಮ ಗಾಯನದ ಮೂಲಕ ಮೋಡಿ ಮಾಡಿದ್ದ ಸಿದ್ ಶ್ರೀರಾಮ್ ಇದೀಗ ಸಿನಿಮಾದಲ್ಲಿ ನಾಯಕರಾಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈ ವಿಷ್ಯ ಕೇಳಿ ಅವ್ರ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

- Advertisment -

Most Popular

Recent Comments