ಕಾರ್ನಾಡರಿಗೆ ಆಡಂಬರವಿಲ್ಲದ ಅಂತ್ಯಸಂಸ್ಕಾರ

0
149

ಬೆಂಗಳೂರು: ಕಲ್ಪಲ್ಲಿ ರುದ್ರಭೂಮಿಯಲ್ಲಿ ಗಿರೀಶ್​​ ಕಾರ್ನಾಡ್ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯೆಯ ಸಂದರ್ಭ ಯಾವುದೇ ಪೂಜೆಯನ್ನೂ ನಡೆಸಲಾಗಿಲ್ಲ. ರುದ್ರಭೂಮಿಯಲ್ಲೇ ಒಂದಿಷ್ಟು ಆಪ್ತರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೈಯ್ಯಪ್ಪನಹಳ್ಳಿಯ ಕಲ್ಪಲ್ಲಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಕಾರ್ನಾಡರ ಆಶಯದಂತೆ ಅವರಿಗೆ ಯಾವುದೇ ಸರ್ಕಾರಿ ಗೌರವ ಸಲ್ಲಿಕೆಯಾಗಿಲ್ಲ. ಹಾಗೆಯೇ ಗಿರೀಶ್​ ಕಾರ್ನಾಡರ ಅಂತ್ಯ ಸಂಸ್ಕಾರಕ್ಕೆ ಯಾವುದೇ ಆಡಂಬರವೂ ಇರಲಿಲ್ಲ. ಅಂತಿಮ ಯಾತ್ರೆಯಲ್ಲೂ ಕಾರ್ನಾಡರಿಗೆ ಹಾರಗಳನ್ನು ಹಾಕಿರಲಿಲ್ಲ. ಸರಳವಾಗಿ ಕಾರ್ನಾಡ್​ ಅಂತ್ಯಕ್ರಿಯೆ ನೆರವೇರಿದೆ.

LEAVE A REPLY

Please enter your comment!
Please enter your name here