Sunday, May 29, 2022
Powertv Logo
Homeರಾಜ್ಯವರುಣನ ಅರ್ಭಟಕ್ಕೆ ಸಿಲಿಕಾನ್​ ಸಿಟಿ ತತ್ತರ

ವರುಣನ ಅರ್ಭಟಕ್ಕೆ ಸಿಲಿಕಾನ್​ ಸಿಟಿ ತತ್ತರ

ಬೆಂಗಳೂರಿನಲ್ಲಿ ನಿನ್ನೆ ಸಂಜೆ ಮಳೆಯಾಗಿದ್ದು, ವಿವಿಧ ಬಡಾವಣೆಗಳಲ್ಲಿ ಮರಗಳು ಉರುಳಿಬಿದ್ದಿದ್ದು ,ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜನಜೀವನ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಈ ನಡುವೆ ಬೆಂಗಳೂರು ಸೇರಿದಂತೆರಾಜ್ಯದ ವಿವಿಧೆಡೆ ಇನ್ನೂ ಐದು ದಿನ ವರುಣನ ಅರ್ಭಟ ಮುಂದುವರೆಯಲಿದೆ.

ವ್ಯಾಪಕವಾಗಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಾಮರಾಜನಗರ, ಬೆಂ ಗಳೂರು ಮತ್ತು ಪಶ್ಚಿಮಘಟ್ಟಗಳ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಗಳಿವೆ.ನಾಳೆ ಮತ್ತು ನಾಳಿದ್ದು ಕೆಲ ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ನಗರದ ಹಲವೆಡೆ ಮರಗಳು ಧರೆಗೆ ಉರುಳಿವೆ. ರಾಜರಾಜೇಶ್ವರಿ ನಗರದಲ್ಲಿ 7 ಕಡೆ, ಮಹದೇವಪುರ,ಭಾರತಿ ನರ್ಸಿಂಗ್ ಹೋಮ್​, ಅತ್ತಿಗುಪ್ಪೆ , ಕೆ.ಆರ್.ರಸ್ತೆ, ತ್ಯಾಗರಾಜ ನಗರಗಳಲ್ಲಿ ತಲಾ ಒಂದು ಮರಗಳು ಉರುಳಿವೆ.

- Advertisment -

Most Popular

Recent Comments