Home ಸಿನಿ ಪವರ್ ಸದ್ದಿಲ್ಲದೆ ಸರ್​ಪ್ರೈಸ್ ಕೊಟ್ಟ `ಕೋಟಿಗೊಬ್ಬ’..!

ಸದ್ದಿಲ್ಲದೆ ಸರ್​ಪ್ರೈಸ್ ಕೊಟ್ಟ `ಕೋಟಿಗೊಬ್ಬ’..!

ಕಳೆದ ಮೂರು ತಿಂಗಳಿನಿಂದ ಕಾದು ಕಾದು  ಸುಸ್ತಾಗಿದ್ದ ಕಿಚ್ಚನ ಅಭಿಮಾನಿಗಳಿಗೆ ಇಂದು ಇದ್ದಕಿದ್ದಂತೆ ಹಬ್ಬ ಮಾಡುವ ಯೋಗ ಕೂಡಿ ಬಂದಿದೆ. ಯಾವುದೇ ಸೂಚನೆ ಕೊಡದೆ ಕೋಟಿಗೊಬ್ಬ ಕೊಟ್ಟ ಸರ್ ಪ್ರೈಸ್ ಗೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ .

ಸುದೀಪ್ ಈಗ ‘ಫ್ಯಾಂಟಮ್’ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅನೂಪ್ ಭಂಡಾರಿ ನಿರ್ದೇಶನದ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈಗಾಗಲೇ ಅದರ ಎರಡು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದು, ಅದನ್ನು ಕಂಡು ಸುದೀಪ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಕಿಚ್ಚನ ಫ್ಯಾಂಟಮ್​ ಬಗ್ಗೆ ಬ್ಯಾಕ್​ ಬ್ಯಾಕ್​ ಅಪ್​ಡೇಟ್​ ಸಿಗುತ್ತಿವೆ ಆದರೆ ಕೋಟಿಗೊಬ್ಬ-3 ಸಿನಿಮಾ ರಿಲೀಸ್​ಗೆ ರೆಡಿ ಅನ್ನೋ ಮಾತು ಬಿಟ್ಟು ಬೇರೆ ಯಾವ ಅಪ್​ಡೆಟ್​ಗಳು ಸಿಕ್ಕಿರಲಿಲ್ಲ. ಕೋಟಿಗೊಬ್ಬ 3′ ಚಿತ್ರದಿಂದ ಮತ್ತೊಂದು  ಹಾಡು ಬಿಡುಗಡೆ ಮಾಡಿ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬೇಡಿಕೆ ಇರಿಸುತ್ತಿದ್ದರು. ಮೂರು ತಿಂಗಳಿನಿಂದ ಕೋಟಿಗೊಬ್ಬ 3 ಚಿತ್ರದ ಯಾವುದೇ ಅಪ್‌ಡೇಟ್ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆಕಾಶಾನೇ ಅದರಿಸುವ… ಈ ಭೂಮಿನೇ ಪಳಗಿಸುವ… ಕೋಟಿ ಕೋಟಿ ನೋಟುಗಳ ಕೋಟೆ ಮೇಲೆ ಕುಳಿತಿರುವ ಕೋಟಿಗೊಬ್ಬ…. ಹಾಡು ಅಭಿಮಾನಿಗಳಿಗೆ ತುಂಬಾ ಇಷ್ವವಾಗಿತ್ತು . ಯುಟ್ಯೂಬ್​ ನಲ್ಲಿ ಈ ಹಾಡು 9 ಮಿಲಿಯನ್​ ವೀಕ್ಷಣೆ ಕಂಡು ದಾಖಲೆ ಬರೆದಿತ್ತು . ಮೂರು ತಿಂಗಳ ಹಿಂದೆ ಕಿಚ್ಚನ ಅಭಿಮಾನಿಗಳು ಸಂಭ್ರಿಮಿಸಿದ್ದರು.

ಈ ಹಾಡು ಬಿಡುಗಡೆಯಾದ ನಂತ್ರ ಸಿನಿಮಾ ಟೀಮ್​ನಿಂದ ಯಾವುದೇ ಅಪ್​ಡೇಟ್​ ಸಿಗದೆ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಈಗ ಲಡ್ಡು ಬಂದು ಬಾಯಿಗೆ ಬಿದ್ದಹಾಗೆ ಆಗಿದೆ.​ ಯಾವುದೇ ಸುಳಿವು ನೀಡದೆ ಚಿತ್ರತಂಡ ಇಂದು ಬೆಳ್ಳಂ ಬೆಳಿಗ್ಗೆ ಕಿಚ್ಚನ ಫ್ಯಾನ್ಸ್​ಗೆ ಫುಲ್​ ಸರ್​ಪ್ರೈಸ್​ ಕೊಟ್ಟಿದೆ.

ಇಂದು ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ಅವರ ಹುಟ್ಟುಹಬ್ಬ , ಅವರ ಹುಟ್ಟುಹಬ್ಬದ ವಿಶೇಷವಾಗಿ ಕೋಟಿಗೊಬ್ಬ-3 ಟೀಮ್​ ಹೊಸ ಪೋಸ್ಟರ್​ ರಿಲೀಸ್​ ಮಾಡಿದೆ. ಇದು ಈ ಹಿಂದೆ ರಿಲೀಸ್​ ಆದ ಪೋಸ್ಟರ್​ಗಿಂತ ಭಿನ್ನವಾಗಿದೆ, ಪಕ್ಕಾ ಮಾಸ್​ ಲುಕ್​ನ ಕಿಚ್ಚನ ಖದರ್​ ಅವತಾರ ಇದೀಗ ರಿವೀಲ್​ ಆಗಿದೆ. ಈ ಪೋಸ್ಟರ್​ ನೋಡಿ ಕಿಚ್ಚನ ಅಭಿಮಾನಿಗಳು ಹಬ್ಬ ಆಚರಿಸುತ್ತಿದ್ದಾರೆ.

ಸುದೀಪ್‌ ಈ ಚಿತ್ರಕ್ಕೆ ಕಥೆ ಬರೆದಿದ್ದು, ಶಿವಕಾರ್ತಿಕ್ ಇದರ ನಿರ್ದೇಶನ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಪೋಲ್ಯಾಂಡ್‌ನಲ್ಲಿ ಮಾಡಲಾಗಿದೆ. ಸುದೀಪ್‌ಗೆ ಜೋಡಿಯಾಗಿ ಮಲಯಾಳಂ ನಟಿ ಮಡೋನಾ ಸೆಬಾಸ್ಟೀನ್‌ ನಟಿಸಿದ್ದು, ಶ್ರದ್ಧಾ ದಾಸ್‌, ಅಫ್ತಬ್‌ ಶಿವದಾಸನಿ, ರವಿಶಂಕರ್, ಶ್ರೀ ಮಹದೇವ್ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಸ್ಯಾಟಲೈಟ್, ಡಬ್ಬಿಂಗ್ ಹಕ್ಕುಗಳಿಂದಲೇ 27 ಕೋಟಿ ರೂ. ಗಳಿಕೆಯಾಗಿದೆಯಂತೆ.

ಚಿತ್ರ ಮಂದಿರ ಓಪನ್ ಆದ ತಕ್ಷಣ ಸಿನಿಮಾ ರಿಲೀಸ್​ ಮಾಡುವ ಪ್ಲಾನ್​ನಲ್ಲಿದೆ ಚಿತ್ರತಂಡ. ಅಲ್ಲದೆ ಮುಂದಿನ ತಿಂಗಳು ಸುದೀಪ್​ ಹುಟ್ಟು ಹಬ್ಬವಿರುವ ಕಾರಣ ಮತ್ತೊಂದು ಬಿಗ್​ ಸರ್​ಪ್ರೈಸ್​ ಕೊಡಲಿದೆಯಂತೆ..!

 

-ಮನೋಜ್​ ವಿಜಯೀಂದ್ರ

LEAVE A REPLY

Please enter your comment!
Please enter your name here

- Advertisment -

Most Popular

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

ಅಪರಿಚಿತ ವ್ಯಕ್ತಿ ಮರದ ತುದಿಗೇರಿ ನೇಣಿಗೆ ಶರಣು!

ವಿಜಯಪುರ : ವ್ಯಕ್ತಿಯೋರ್ವ ಮರದ ತುದಿಗೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದಲ್ಲಿ ‌ನಡೆದಿದೆ. ನಗರದ ಐನಾಪುರ ಕ್ರಾಸ್ ಬಳಿ ಇರುವ ಅರಳಿ ಮರದ ತುದಿಗೇರಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಅಂದಾಜು 50...

Recent Comments