SIIMA 2019 : ರಾಕಿಭಾಯ್​​ ಅತ್ಯುತ್ತಮ ನಟ, ಡಾಲಿ ಅತ್ಯುತ್ತಮ ಖಳನಟ..!

0
389

SIIMA 2019 ಅವಾರ್ಡ್​ ಪ್ರದಾನ ಮಾಡಲಾಗಿದ್ದು, ರಾಕಿಂಗ್ ಸ್ಟಾರ್ ಯಶ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೆಜಿಎಫ್​ ಸಿನಿಮಾದ ರಾಕಿಭಾಯ್ ಪಾತ್ರಕ್ಕೆ ಯಶ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಟಗರು ಸಿನಿಮಾದ ಡಾಲಿ ಪಾತ್ರಕ್ಕಾಗಿ ನಟ ಧನಂಜಯ್​ ಅತ್ಯುತ್ತಮ ಖಳನಟ ಪ್ರಶಸ್ತಿ ಪಡೆದಿದ್ದಾರೆ.
ಕತಾರ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈಮಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಯಶ್, ಧನಂಜಯ್ ಅವರಲ್ಲದೆ ಕೆಜಿಎಫ್ ಸಿನಿಮಾದ ನಿರ್ದೆಶನಕ್ಕಾಗಿ ಡೈರೆಕ್ಟರ್ ಪ್ರಶಾಂತ್ ನೀಲ್​ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಸಿನಿಮಾದಲ್ಲಿನ ಅಭಿನಯಕ್ಕಾಗಿ ಪ್ರಕಾಶ್ ತುಮಿನಾಡ್​​ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ ಪಡೆದಿದ್ದಾರೆ.

LEAVE A REPLY

Please enter your comment!
Please enter your name here