Home ರಾಜ್ಯ 'ಏಕಿ ಮಿನಿಟ್' ಎಂದು ಶೋಭಾ ಕರಂದ್ಲಾಜೆಗೆ ಸಿದ್ದು ತಿರುಗೇಟು​..!

‘ಏಕಿ ಮಿನಿಟ್’ ಎಂದು ಶೋಭಾ ಕರಂದ್ಲಾಜೆಗೆ ಸಿದ್ದು ತಿರುಗೇಟು​..!

ಬೆಂಗಳೂರು : ಇಂದು ಬೆಳ್ಳಗ್ಗೆಯೇ ಸಿದ್ದರಾಮಯ್ಯ – ಶೋಭಾ ಕರಂದ್ಲಾಜೆ ನಡುವೆ ನಂಬರ್ ಗೇಮ್ ಟ್ವೀಟ್​ ವಾರ್ ಶುರುವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ‘’ತಮ್ಮ ಟ್ವಿಟರ್ ಅಕೌಂಟ್​ನಲ್ಲಿ ‘’105 ಸಂಖ್ಯೆ 78ಕ್ಕಿಂತ ದೊಡ್ಡದು, ಮತದಾರರು ಬಿಜೆಪಿಗೆ ಬಹುಮತವನ್ನು ಕೊಟ್ಟಿದ್ದಾರೆ.  ಲೋಕಸಭೆ ಚುನಾವಣೆಯಲ್ಲಿ ಕಳೆದುಕೊಂಡಿರುವ ಗೌರವದಿಂದ ಸಾಮಾನ್ಯ ಜ್ಞಾನವೂ ಇಲ್ಲದಂತೆ ಮಾಡಿತೇ?’ಎಂದು ಟ್ವೀಟ್ ಮೂಲಕ  ಕಾಂಗ್ರೆಸ್​ಗೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದರು.

ಇದಕ್ಕೆ  ಸಿದ್ದು ನಂಬರ್ ಗೇಮ್ ಮೂಲಕವೇ ಉತ್ತರ​ ನೀಡಿದ್ದಾರೆ. ‘’ ನನಗೆ ಅರ್ಥವಾದ ಪ್ರಕಾರ 113 ಸಂಖ್ಯೆ 105ಕ್ಕಿಂತ ದೊಡ್ಡದು.  ಸರ್ಕಾರ ರಚನೆ ಮಾಡಲು ಬೇಕಾದ ನಂಬರ್ 113, ‘ಏಕಿ ಮಿನಿಟ್’ ಎಂಬ ನಿಮ್ಮ ಕಳಪೆ ರಾಜಕೀಯ ಬಿಟ್ಟು ಪ್ರಜಾಪ್ರಭುತ್ವದ ಗಣಿತ ಕಲಿಯಿರಿ ಎಂದು ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದ್ದಾರೆ. ಇತ್ತೀಚೆಗೆ ಶೋಭಾ ಕರಂದ್ಲಾಜೆ ಸಂಸತ್ತಿನಲ್ಲಿ ಬಳಸಿದ್ದ ‘ಏಕಿ ಮಿನಿಟ್’ ಎಂದ ಪದ ಎಲ್ಲೆಡೆ ಟ್ರೋಲ್ ಆಗಿತ್ತು.   

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments