ಮಾಜಿ ಸಿಎಂ ಎಸ್​.ಎಂ. ಕೃಷ್ಣ ಅಳಿಯ ಸಿದ್ಧಾರ್ಥ್ ಮೃತದೇಹ ಪತ್ತೆ

0
1555

ಮಂಗಳೂರು : ಮೊನ್ನೆ ರಾತ್ರಿಯಿಂದ  ನಾಪತ್ತೆಯಾಗಿದ್ದ  ಎಸ್​. ಎಂ ಕೃಷ್ಣರವರ ಅಳಿಯ ಹಾಗೂ ಉದ್ಯಮಿ ಸಿದ್ದಾರ್ಥ್​ ಅವರ ಮೃತ ದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ .

36 ಗಂಟೆ ಸತತ ಶೋಧಕಾರ್ಯದ ಬಳಿಕ ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಮೀನುಗಾರರಿಗೆ ಹೊಯ್ಗೆ ಬಜಾರ್​ ಎಂಬಲ್ಲಿ ಸಿದ್ಧಾರ್ಥ್​ರವರ ಮೃತ ದೇಹ ಸಿಕ್ಕಿದೆ. ಸಿದ್ಧಾರ್ಥ್ ಬದುಕಿ ಬರುತ್ತಾರೆ ಎಂಬ ನಂಬಿಕೆ ಹುಸಿಯಾಗಿದೆ. ಮೃತದೇಹ ಸಿದ್ಧಾರ್ಥ್ ಅವರದ್ದೇ ಎಂದು ಸಂಬಂಧಿಕರು ದೃಡಪಡಿಸಿದ್ಧಾರೆ. ಇನ್ನು 11 ಗಂಟೆ ಸುಮಾರಿಗೆ ಮರಣೋತ್ತರ ಪರೀಕ್ಷೆ ನಡೆಯಲಿದ್ದು ನಂತರ ಸಿದ್ಧಾರ್ಥ್​ ಹುಟ್ಟೂರು ಚಿಕ್ಕಮಗಳೂರಿನ ಚಟ್ಟನಹಳ್ಳಿಯ ಚೇತನಹಳ್ಳಿ ಎಸ್ಟೇಟ್​​ಗೆ ಮೃತ ದೇಹವನ್ನು ರವಾನೆ ಮಾಡಲಾಗುತ್ತದೆ. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ​ಎಸ್​.ಎಂ. ಕೃಷ್ಣ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಕುಟುಂಬಸ್ಥರು, ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.

LEAVE A REPLY

Please enter your comment!
Please enter your name here