Saturday, May 21, 2022
Powertv Logo
Homeರಾಜ್ಯರಾಜ್ಯ ಸರ್ಕಾರದ ಮೇಲೆ ಸಿದ್ದರಾಮಯ್ಯ ಗರಂ!

ರಾಜ್ಯ ಸರ್ಕಾರದ ಮೇಲೆ ಸಿದ್ದರಾಮಯ್ಯ ಗರಂ!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿರುವ ಸರಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಪಗೊಂಡಿದ್ದು, ಬಿಜೆಪಿ ಸರಕಾರ ಕಾಂಗ್ರೆಸ್ ಮೇಲೆ  ಪ್ರಹಾರ ಮಾಡಲು ಮುಂದಾಗಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜೂನ್ 14 ರಂದು ನಡೆಯುವ ಕೆಪಿಸಿಸಿ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನೀಡದಿರುವುದು  ಸರ್ಕಾರದ ದಮನಕಾರಿ ನೀತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ 150 ಅಲ್ಲ, 60 ಜನರೂ ಸೇರುತ್ತಿರಲಿಲ್ಲ. ಕಾನೂನು ಪ್ರಕಾರ ನಾವು ಏನು ಕಾರ್ಯಕ್ರಮ ಮಾಡಬೇಕೋ ಅದನ್ನು ಮಾಡುತ್ತೀವಿ ಎಂದರು.

ಹಾಗಾದರೆ ಬಿಹಾರದಲ್ಲಿ, ಉತ್ತರ ಪ್ರದೇಶದಲ್ಲಿ ಅನುಮತಿ ಕೊಟ್ಟಿದ್ಯಾಕೆ? ಅಮಿತ್ ಶಾ ವರ್ಚುವಲ್ ರಾಲಿ ನಡೆಸಲು  ಯಾಕೆ ಅನುಮತಿ ಕೊಟ್ರಿ? ಬಿಜೆಪಿಗೆ ಒಂದು ನೀತಿ ಕಾಂಗ್ರೆಸ್​​ಗೆ ಒಂದು ನೀತಿ ಏಕೆ  ಎಂದು ಪ್ರಶ್ನಿಸಿದ ಅವರು ಇವೆಲ್ಲ ಬಿಜೆಪಿ ಮಾಡುತ್ತಿರುವ ಷಡ್ಯಂತ್ರ ಎಂದು ಆರೋಪಿಸಿದರು.

16 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments