ಮೋದಿಗೆ ಸಿದ್ದು ಟ್ವೀಟ್ ಗುದ್ದು..!

0
168

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವೀಟ್​ ಮೂಲಕ ಟಾಂಗ್ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಬಿಜೆಪಿ, ಬಿ.ಎಸ್​ ಯಡಿಯೂರಪ್ಪ ಅವರ ವಿರುದ್ಧ ಸಿಡಿಸಿರುವ ಆಡಿಯೋ ಬಾಂಬ್​ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿ ಮೋದಿಗೆ ಗುದ್ದು ನೀಡಿದ್ದಾರೆ. 

‘ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ’ ಅಂತ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ‘ನಿಮಗೆ ನಾಚಿಗೆ ಆಗಬೇಕು’ ಅಂತ ಪ್ರಧಾನಿ ಮೋದಿ ಅವರ ವಿರುದ್ಧ ಗರಂ ಆಗಿದ್ದಾರೆ. 

ಬಜೆಟ್​ ಗೆ ಮುನ್ನ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಶಾಸಕ ನಾಗನಗೌಡ ಅವರ ಮಗ ಶರಣಗೌಡ ನಾಯಕ ಅವರ ಜೊತೆ ಯಡಿಯೂರಪ್ಪ ಮಾತನಾಡಿ ತಮ್ಮ ಪಕ್ಷ ಸೇರಲು ಆಮಿಷವೊಡ್ಡಿದ್ದಾರೆ ಎನ್ನಲಾಗಿರೋ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. 

ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಸಿಡಿಸಿದ್ರು ಆಡಿಯೂ ಬಾಂಬ್​..!

ಸುದ್ದಿಗೋಷ್ಠಿ ನಡೆಸಿದ ಸಿಎಂ ಎಚ್​. ಡಿ ಕುಮಾರಸ್ವಾಮಿ ಆಪರೇಷನ್ ಕಮಲದ ಆಡಿಯೋ ರಿಲೀಸ್ ಮಾಡಿದ್ರು. ಆಡಿಯೋ ರಿಲೀಸ್​ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರೋ ಸಿದ್ದರಾಮಯ್ಯ ಅವರು ” ನಿಮ್ಮ ಪಕ್ಷದ ನಿಯತ್ತನ್ನು ಬಯಲು ಮಾಡಿದ ಈ ಆಡಿಯೋ ಕೇಳಿ. ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ. ನಿಮ್ಮ ಕೆಲಸಕ್ಕೆ ನಾಚಿಗೆ ಆಗ್ಬೇಕು ಅಂತ ಟ್ವೀಟ್​ ಮಾಡಿದ್ದಾರೆ.

LEAVE A REPLY

Please enter your comment!
Please enter your name here