ಯೋಧರು ಉಗ್ರರ ಹುಟ್ಟಡಗಿಸಿದ್ದು ಸಿದ್ದರಾಮಯ್ಯ ಅವರಿಗೆ ಗೊತ್ತೇ ಇಲ್ವಂತೆ..!

0
329

ಚಿಕ್ಕಮಗಳೂರು : ಪಾಕ್​ ಆಕ್ರಮಿತ ಕಾಶ್ಮೀರದ 2 ಮತ್ತು ಪಾಕ್​ ಗಡಿಯ 1 ಉಗ್ರರ ಅಡಗು ತಾಣದ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಯ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಈ ಬಗ್ಗೆ ಗೊತ್ತೇ ಇಲ್ವಂತೆ..!
ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಅಂತ ಸುದ್ದಿಗಾರರು ಲೋಗೋ ಹಿಡಿದಾಗ ಸಿದ್ದರಾಮಯ್ಯ ಅವರು ಉಡಾಫೆ ಉತ್ತರ ನೀಡಿದ್ದಾರೆ. ‘ದಾಳಿ ಎಲ್ಲಿ ಮಾಡಿದ್ದು? ಯಾರು ಮಾಡಿದ್ದು? ನಾವು ಮಾಡಿದ್ದೀವಾ? ಅವರು ಮಾಡಿದ್ದಾರಾ? ಅಂತ ಪ್ರಶ್ನೆ ಮಾಡಿದ್ದಾರೆ. ಬಳಿಕ ಇಲ್ಲ, ನಂಗೆ ಆ ಬಗ್ಗೆ ಗೊತ್ತಿಲ್ಲ, ತಿಳ್ಕೊಂಡು ಹೇಳ್ತೀನಿ’ ಅಂದಿದ್ದಾರೆ.

LEAVE A REPLY

Please enter your comment!
Please enter your name here