ಬಿಎಸ್​ವೈ ಪಟ್ಟಾಭಿಷೇಕಕ್ಕೆ ದೋಸ್ತಿ ನಾಯಕರ ಆಕ್ರೋಶ..!

0
255

ಬೆಂಗಳೂರು : 14 ತಿಂಗಳ ಕಾಂಗ್ರೆಸ್-ಜೆಡಿಎಸ್​ ಮೈತ್ರಿ ಸರ್ಕಾರ ಪತನವಾಗಿದ್ದು, ಬಿಜೆಪಿ ಸರ್ಕಾರ ರಚಿಸಲು ಮುಂದಾಗಿದೆ. ಬಿ.ಎಸ್ ಯಡಿಯೂರಪ್ಪನವರು 4ನೇ ಬಾರಿ ಸಿಎಂ ಆಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ರೆಡಿಯಾಗಿದ್ದಾರೆ. ಬಿಎಸ್​​ವೈ ಪಟ್ಟಾಭಿಷೇಕಕ್ಕೆ ಇಂದು ಸಂಜೆ 6ಗಂಟೆಗೆ ಮುಹೂರ್ತ ಫಿಕ್ಸ್ ಆಗಿದೆ. ಬಿ.ಎಸ್​ ವೈ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರೋದಕ್ಕೆ ದೋಸ್ತಿ ನಾಯಕರು ಕೆಂಡಾಮಂಡಲರಾಗಿದ್ದಾರೆ.
ಬಿಜೆಪಿಗೆ ಸರ್ಕಾರ ರಚಿಸೋಕೆ ಅವಕಾಶ ಕೊಟ್ಟಿರೋದಕ್ಕೆ ರಾಜ್ಯಪಾಲರ ವಿರುದ್ಧ ಜೆಡಿಎಸ್​ ಗರಂ ಆಗಿದೆ. ರಾಜ್ಯಪಾಲರ ಕ್ರಮಕ್ಕೆ ಜೆಡಿಎಸ್​ ಅಸಮಧಾನ ವ್ಯಕ್ತಪಡಿಸಿದ್ದಾರೆ. ”ವಿಧಾನಸಭೆಯ ಸಂಖ್ಯಾಬಲ 222, ಬಹುಮತಕ್ಕೆ ಬೇಕಾಗಿರುವ ಸಂಖ್ಯಾಬಲ 112. ಯಡಿಯೂರಪ್ಪ ನನಗೆ 105 ಶಾಸಕರ ಬೆಂಬಲವಿದೆ ಎಂದು‌ ಹಕ್ಕು ಮಂಡಿಸಿದ್ದಾರೆ. ರಾಜ್ಯಪಾಲರು ಬಹುಮತದ ಸರ್ಕಾರ ರಚನೆಗೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಒಂದೇ ನಿಮಿಷದಲ್ಲಿ ಅನುಮತಿ‌ ನೀಡಿದ್ದು ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ” ಅಂತ ಜೆಡಿಎಸ್​ ಟ್ವೀಟ್ ಮೂಲಕ ಅಸಮಧಾನ ಹೊರಹಾಕಿದೆ.
ಅದೇರೀತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೂಡ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ. ಬಿಜೆಪಿಗೆ ಕೇವಲ 105 ಶಾಸಕರ ಬೆಂಬಲವಿದೆ. ಈ ಸಂಖ್ಯಾಬಲದಿಂದ ಬಹುಮತ ಸಾಬೀತು ಪಡಿಸೋದು ಅಸಾಧ್ಯವಾದುದು. ಸಂವಿಧಾನಾತ್ಮಕವಾಗಿ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವೇ ಇಲ್ಲ. ಬಿಜೆಪಿ ಸಾಂವಿಧಾನಿಕ ಮೌಲ್ಯಗಳನ್ನು ನಂಬುವುದಿಲ್ಲ ಅನ್ನೋದಕ್ಕೆ ಇದು ಸ್ಪಷ್ಟ ನಿದರ್ಶನ ಅಂತ ಕೆಂಡಾಮಂಡಲರಾಗಿದ್ದಾರೆ.

LEAVE A REPLY

Please enter your comment!
Please enter your name here