‘ಬಿಎಸ್​ವೈ ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್​​’: ಸಿದ್ದರಾಮಯ್ಯ

0
296

ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತೊಮ್ಮೆ ಗುಡುಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ಯಡಿಯೂರಪ್ಪ ಅವರು ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್. ಸಿಎಂ ಆಗಿದ್ದವರು ಶಾಸಕರನ್ನು ಕೊಂಡುಕೊಳ್ಳಲು ಹೊರಟಿದ್ದಾರೆ. ಆಡಿಯೋದಲ್ಲಿನ ವಾಯ್ಸ್​ ಮಿಮಿಕ್ರಿ ಅಂದಿದ್ದವರು ಈಗ ನನ್ನದೇ ಧ್ವನಿ ಅಂದಿದ್ದಾರೆ. ನನ್ನ ವಾಯ್ಸ್ ಅಂತ ಪ್ರೂವ್ ಆದ್ರೆ ರಾಜೀನಾಮೆ ಕೊಡ್ತೀನಿ. ರಾಜಕೀಯ ನಿವೃತ್ತಿ ಹೊಂದುತ್ತೀನಿ ಅಂದಿದ್ದ ಅವರಿಗೆ ಸಾರ್ವಜನಿಕ ಜೀವನದಲ್ಲಿರಲು ನೈತಿಕತೆ ಇಲ್ಲ. ರಾಜೀನಾಮೆ ನೀಡಲಿ” ಎಂದರು.

LEAVE A REPLY

Please enter your comment!
Please enter your name here