‘ಕೆಲ್ಸ ಮಾಡ್ದವ್ರು ನಾವು , ವೋಟ್​ ಮಾತ್ರ ಬಿಜೆಪಿಗೆ’ : ಸಿದ್ದರಾಮಯ್ಯ

0
804

ಬಾದಾಮಿ : ಕೆಲಸ ಮಾಡಿದವ್ರು ನಾವು, ವೋಟ್ ಮಾತ್ರ ಬಿಜೆಪಿಗಾ? ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಾದಾಮಿಯ ಆಲೂರ ಎಸ್​.ಕೆ ಗ್ರಾಮದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲೀಡ್​ ಬಂದಿದ್ದಕ್ಕೆ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ರು.
”ಕೆಲಸ ಮಾಡಿದವರು ನಾವು, ವೋಟ್ ಮಾತ್ರ ಬಿಜೆಪಿಗಾ?ಏನು ನೋಡಿ ಬಿಜೆಪಿಗೆ ವೋಟ್ ಹಾಕ್ತಾರೆಂದು ಗೊತ್ತಾಗುತ್ತಿಲ್ಲ. ಬಾದಾಮಿಯಲ್ಲಿ ನಮಗೆ ಲೀಡ್ ಬರುತ್ತೆ ಅಂದುಕೊಂಡಿದ್ದೆ. ಆದ್ರೆ ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿಗೆ 9 ಸಾವಿರ ಲೀಡ್ ಬಂದಿದೆ. ಪಂಚಾಯ್ತಿಗೆ ಅನುದಾನ, ಅನ್ನಭಾಗ್ಯ, ಶೂಭಾಗ್ಯ ತಂದಿದ್ದು ನಾವು. ಆದ್ರೆ ಜನ ವೋಟ್​ ಹಾಕುವುದು ಮಾತ್ರ ಬಿಜೆಪಿಗೆ” ಅಂತ ಹೇಳಿದ್ರು.

LEAVE A REPLY

Please enter your comment!
Please enter your name here