ದಾವಣಗೆರೆ : ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ. ಬಿಜೆಪಿ ಬಿ ಟೀಂ ಆಗಿರೋದ್ರಿಂದ ಅವರ ಬಗ್ಗೆ ಜಾಸ್ತಿ ಮಾತನಾಡಲ್ಲ. ಬಿಜೆಪಿ ಜೊತೆ ಹೋದವರು ಅವರು. ಆದರೆ ಅವರು ನಮ್ಮ ಹತ್ತಿರ ಬಂದಿಲ್ಲ, ನಾವೇ ಹೋಗಿ ಅವರನ್ನು ಸಿಎಂ ಮಾಡಿದ್ದೇವು ಎಂದು ಹೆಚ್ಡಿಕೆ ವಿರುದ್ದ ಸಿದ್ದರಾಮಯ್ಯ ಕಿಡಿಕಾರಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು 150 ಸ್ಥಾನ ಗೆಲ್ಲುವ ತನಕ ನಾನು ವಿಶ್ರಮಿಸುವುದಿಲ್ಲ. ಮುಖ್ಯಮಂತ್ರಿ ಕುರ್ಚಿಯಿಂದ ತೆಗೆದು ಹಾಕಿದ್ದಕ್ಕೆ ಬಿಎಸ್ವೈ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪಗೆ ಟಾಂಗ್ ನೀಡಿದರು. ಬಿಜೆಪಿ ವಿರುದ್ಧ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಅವಧಿಗೂ ಮುನ್ನ ವಿಧಾನಸಭೆ ಚುನಾವಣೆ ನಡೆಯುವುದಿಲ್ಲ ಎಂದರು.
ಇನ್ನು ಯುಪಿ ಮಾದರಿಯಲ್ಲಿ ಬುಲ್ಡೋಜರ್ ಅಮಾಯಕರ ಮೇಲೆ ಹರಿಸುವ ಬದಲು ಶ್ರೀರಾಮಸೇನೆ ಮೇಲೆ ಹರಿಸಬೇಕೆಂದು. ಹುಬ್ಬಳಿ ಗಲಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹುಬ್ಬಳಿ ಗಲಭೆಯ ರೂವಾರಿ ಅಭಿಷೇಕ ಹಿರೇಮಠ ವಿವಾದಾತ್ಮಕ ಪೋಸ್ಟ್ ಮಾಡಿದ್ದಾನೆ. ಇದರ ಹಿಂದೆ ಇರುವವರು ಬಿಜೆಪಿಯವರು. ಅವರೇ ಪೋಸ್ಟ್ ಮಾಡಿಸಿದ್ದಾರೆ ಎಂದರು.
ಉತ್ತರ ಪ್ರದೇಶದಂತೆ ಬುಲ್ಡೋಜರ್ ವ್ಯವಸ್ಥೆ ತರಬೇಕೆಂಬ ಮುತಾಲಿಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಶ್ರೀ ರಾಮ ಸೇನೆ ಮೇಲೆ ಮೊದಲು ಬುಲ್ಡೋಜರ್ ಹರಿಸಬೇಕು ಎಂದು ವಾಗ್ದಾಳಿ ನಡೆಸಿದರು. ಇನ್ನು ಹುಬ್ಬಳ್ಳಿ ಗಲಭೆಗೆ ಬಿಜೆಪಿಯವರೇ ಕಾರಣ. ಅಭಿಷೇಕ್ ಹಿರೇಮಠ್ ಯಾರು ? ಅವರೇ ಹಿಂದೇ ನಿಂತು ಮಾಡಿಸಿದ್ದಾರೆ ಎಂದು ಕಿಡಿಕಾರಿದರು.