ಹುಬ್ಬಳ್ಳಿ : ಗಲಭೆಯನ್ನ ನಾನು ಖಂಡಿಸಿದ್ದೇನೆ. ಗೃಹ ಸಚಿವರು ಬೇಜವಬ್ದಾರಿ ಸಚಿವರಾಗಿದ್ದಾರೆ. ಅವರು ಗೃಹ ಸಚಿವರಾಗೋದಕ್ಕೆ ಅನ್ಫಿಟ್ ಹೀಗಾಗಿ ಕೂಡಲೇ ಅವರು ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ ಕಿಡಿಕಾಡಿದರು.
ಪಿಎಸ್ಐ ನೇಮಕಾತಿ ಅಕ್ರಮ ವಿಚಾರಕ್ಕೆ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ರೂ ಕೂಡಲೇ ಕ್ರಮ ಕೈಗೊಳ್ಳಬೇಕು. ಕಾನೂನಿನ ರಿತ್ಯ ಬಂಧನ ಮಾಡಬೇಕು. ಈ ಘಟನೆಯು ಜಾಮೀನು ರಹಿತ ಅಫೆನ್ಸ್ ಆಗಿದೆ. ಅಲ್ಲದೇ ಕೆಲವರಿಗೆ ಬಹಳ ಅನ್ಯಾಯ ಆಗಿದೆ ಎಂದು ಹೇಳಿದರು.
ಇನ್ನು ಇದೇ ವೇಳೆ ಹುಬ್ಬಳ್ಳಿ ಗಲಭೆಯನ್ನ ಈಗಾಗಲೇ ಖಂಡಿಸಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ನಿರಪರಾಧಿಗಳ ಮೇಲೆ ಕ್ರಮ ಕೈಗೊಳ್ಳಬೇಡಿ ಎಂದಿದ್ದೇನೆ. ಯಾರೋ ಒಬ್ಬ ಮೌಲ್ವಿ ತಪ್ಪು ಮಾಡಿದ್ದಾರೆ ಅಂತ ಎಲ್ಲರ ವಿಚಾರಣೆ ಮಾಡೋದು ಸರಿಯಲ್ಲ. ಇದರಿಂದ ಮತ್ತಷ್ಟು ಕೆಸರೆರೆಚುವ ಕೆಲಸ ಆಗುತ್ತದೆ. ಆದ್ದರಿಂದ ರಾಜ್ಯದಲ್ಲಿ ಶಾಂತಿ ತರುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅದುವಲ್ಲದೇ ಆರಗ ಜ್ಞಾನೇಂದ್ರ ಬೇಜವಾಬ್ದರಿಯುತ ಹೋಂ ಮಿನಿಸ್ಟರ್ ಆಗಿದ್ದಾರೆ. ಬೆಂಗಳೂರಿನ ಡಿ ಜೆ ಹಳ್ಳಿಯಲ್ಲಾದ ಘಟನೆಯಲ್ಲೂ ಹೀಗೆ ಮಾಡಿದರು. ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಲಿಕ್ಕೆ ಗೃಹ ಇಲಾಖೆ ಇರೋದು,ಇವರ ಕೈಲಿ ಆಗಲ್ಲ ಅಂದ್ರೆ ರಾಜೀನಾಮೆ ನೀಡಿ ಮನೆಗೆ ಹೋಗಲಿ.
BJP ಅವರಿಗೆ ಧಮ್ ಇದ್ರೆ SDPI, AIMIM, RSS, ಭಜರಂಗದಳ ಈ ಎಲ್ಲಾ ಸಂಘಟನೆಗಳನ್ನ ಬ್ಯಾನ್ ಮಾಡಲಿ. ಕೂಸನ್ನೂ ಚಿವಟಿ ತೊಟ್ಟಿಲು ತೂಗುವ ಕೆಲಸ ಮಾಡಬೇಡಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.