ಮೈಸೂರು: ಬ್ರಿಟಿಷ್ ವಿರುದ್ಧ ಹೋರಾಟ ಮಾಡಿ ಪ್ರಾಣ ತೆತ್ತಿರುವವರು ಕಾಂಗ್ರೆಸ್ನವರು. ಕ್ವಿಟ್ ಇಂಡಿಯಾ ಸಂದರ್ಭದಲ್ಲಿ ಆರ್ಎಸ್ಎಸ್ ಮುಖ್ಯಸ್ಥರು ಬ್ರಿಟಿಷರಿಗೆ ಹೇಳಿ ಹೋರಾಟಗಾರರನ್ನು ಜೈಲಿಗೆ ಅಟ್ಟಿದ್ದರು. ಇವರಿಂದ ನಾವು ದೇಶಭಕ್ತಿ ಪಾಠ ಕಲಿಬೇಕಿಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿದ ಅವರ ಬಿಜೆಪಿಯಂತಹ ಭ್ರಷ್ಟ ಸರ್ಕಾರ ನನ್ನ ರಾಜಕೀಯ ಬದುಕಿನಲ್ಲಿ ನೋಡಿಲ್ಲ. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಬದುಕು ಅಸಾಧ್ಯವಾಗಿದೆ. ಸರ್ಕಾರ ತನ್ನ ವೈಫಲ್ಯ ಮುಚ್ಚಿಡಲು ಕೋಮುವಾದ ಮುನ್ನಲೆಗೆ ತರುವ ಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡಿ, ಸಮಾಜ ಹೊಡೆಯುತ್ತಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಡಲು ಕಾನೂನು ಬಾಹಿರ ಕೆಲಸ ಮಾಡಿದೆ. ಹಿಜಾಬ್, ಹಲಾಲ್, ವ್ಯಾಪಾರ ನಿರ್ಭಂದ ಏರುವ ಕೆಲಸ ಮಾಡಿದ್ದಾರೆ. ಇವೆಲ್ಲ ಅವರ ತಂದ ವೈಫಲ್ಯ ಮುಚ್ಚಿಕೊಳ್ಳುವ ಯತ್ನವಾಗಿದೆ ಎಂದು ಕಿಡಿಕಾರಿದರು.
ದೇಶ ಹಾಗೂ ರಾಜ್ಯದಲ್ಲಿ ಅಶಾಂತಿ ಉಂಟುಮಾಡುವುದನ್ನು ಬಿಜೆಪಿ ವ್ಯವಸ್ಥಿತವಾಗಿ ಮಾಡುತ್ತಿದೆ.
ಯಾವುದೇ ಒಂದು ಧರ್ಮದ ಮೇಲೆ ರಾಜ್ಯ, ದೇಶ ಇಲ್ಲ. ಸರ್ವ ಧರ್ಮಕ್ಕೆ ಸಮಾನ ಅವಕಾಶ ಇದೆ. ಹಿಂದುತ್ವದ ವಿಚಾರ ಮುಂದಿಟ್ಟುಕೊಂಡು ಜನರ ಭಾವನೆ ಕೆರಳಿಸಿ ಶಾಂತಿ ಕದಡುತ್ತಿದೆ. ಬಹುತ್ವ ಇರುವ ದೇಶದಲ್ಲಿ ನಾವು ಅಣ್ಣ ತಮ್ಮಂದಿರಂತೆ ಬಾಳಬೇಕು. ಬ್ರಿಟಿಷ್ ವಿರುದ್ಧ ಕೇವಲ ಒಂದು ಧರ್ಮ ಹೋರಟ ಮಾಡಿಲ್ಲ. 1915ರಲ್ಲಿ ಹಿಂದೂ ಮಹಾಸಭಾ 1925 ಆರ್ಎಸ್ಎಸ್, 1951 ಜನ ಸಂಘ 1985ರಲ್ಲಿ ಬಿಜೆಪಿ ಸ್ಥಾಪನೆ ಆಗಿದೆ. ಯಾರಾದರೂ ಒಬ್ಬ ಆರ್ ಎಸ್ ಎಸ್, ಜನಸಂಘ, ಹಿಂದೂ ಮಹಾಸಭಾದ ಸ್ವತಂತ್ರಕ್ಕಾಗಿ ಪ್ರಾಣ ತೆತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.
ಅದುವಲ್ಲದೇ ಕಾಂಗ್ರೆಸ್ ನವರ ರಕ್ತ ರಕ್ತದಲ್ಲೂ ದೇಶಭಕ್ತಿ, ರಾಷ್ಟ್ರದ ಭಕ್ತಿ ಇದೆ. ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕೂ ಮುನ್ನ ಅಚ್ಚೇ ದಿನ್ ಆಯೇಗ ಅಂದಿದ್ರು. ಇವತ್ತು ಅಚ್ಚೇ ದಿನ್ ಬಂತ..? ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆಗಳೆಲ್ಲ ಏರಿಕೆ ಆಗಿದೆ.ಮಿಷ್ಟರ್ ನರೇಂದ್ರ ಮೋದಿಜಿ ಕಹಾಯೇ ಅಚ್ಚೆ ಧಿನ್ ಹೇಳಿ, ಜನರಿಗೆ ಉತ್ತರ ಕೊಡಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.