ಕೊಹ್ಲಿ ಸ್ಥಾನಕ್ಕೆ 19ರ ಶುಭ್ಮನ್ ಗಿಲ್ ಬಂದ್ರೆ ಒಳ್ಳೆಯದು ಎಂದ ಮಾಜಿ ಕ್ಯಾಪ್ಟನ್!

0
214

ಟೀಮ್​ ಇಂಡಿಯಾ ಈಗಾಗಲೇ ನ್ಯೂಜಿಲೆಂಡ್ ವಿರುದ್ಧ ಒಡಿಐ ಸರಣಿಯನ್ನು ಗೆದ್ದಿದೆ. 5 ಮ್ಯಾಚ್​ಗಳ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ನೇತೃತ್ವ ಭಾರತ ಸತತ 3 ಮ್ಯಾಚ್​ ಜಯಿಸಿದೆ. ಇನ್ನೆರಡು ಪಂದ್ಯಗಳು ಭಾರತದ ಪಾಲಿಗೆ ಔಪಚಾರಿಕ ಪಂದ್ಯಗಳಷ್ಟೇ. ಆದರೆ, ನ್ಯೂಜಿಲೆಂಡ್​ಗೆ ತವರು ನೆಲದಲ್ಲಿ ಮರ್ಯಾದಿ ಉಳಿಸಿಕೊಳ್ಳಲು ಉಳಿದ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡವಿದೆ.
ಇನ್ನು ಬಾಕಿ ಇರುವ ಎರಡು ಒಡಿಐ ಮ್ಯಾಚ್​ಗಳು ಹಾಗೂ ಟಿ20 ಸೀರಿಸ್​ನಿಂದ ಕ್ಯಾಪ್ಟನ್​ ವಿರಾಟ್​​​ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ.
ವಿರಾಟ್​ ಕೊಹ್ಲಿ ಅವರ ಸ್ಥಾನದಲ್ಲಿ 19ರ ಶುಭ್ಮನ್​ ಗಿಲ್​​ ಆಡುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಗಿಲ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ.
ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​ ಸುನೀಲ್​​ ಗವಾಸ್ಕರ್​ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್​ ಕೊಹ್ಲಿ ಅವರು ವಿಶ್ರಾಂತಿಯಲ್ಲಿರುವುದರಿಂದ ಅವರು ಆಡುವ 3ನೇ ಕ್ರಮಾಂಕದಲ್ಲಿ ಶುಭ್ಮನ್​​ ಗಿಲ್​ ಅವರಿಗೆ ಸ್ಥಾನ ನೀಡುವುದು ಒಳ್ಳೆಯದು. ಗಿಲ್ ಸಿಗುವ ಅವಕಾಶವನ್ನು ಬಳಸಿಕೊಂಡು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಬೇಕು ಅಂದಿದ್ದಾರೆ. ಇನ್ನು, ವಿರಾಟ್​ ಕೊಹ್ಲಿ ಕೂಡ ಶುಭ್ಮನ್​ ಗಿಲ್ ಮತ್ತು ಪೃಥ್ವಿ ಶಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here