ಮೊಗ್ಗಿನ ಮನಸ್ಸು ಚಿತ್ರದಿಂದ ಎಲ್ಲರ ಮನಗೆದ್ದಿದ್ದ ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಮಂಗಳೂರು ಮೂಲದ ಸುಮಂತ್ ಮಹಾಬಲ ಎಂಬುವವರನ್ನು ಶುಭಾಪೂಂಜಾ ವರಿಸಲಿದ್ದು, ಇದೇ ಡಿಸೆಂಬರ್ನಲ್ಲಿ ಇಬ್ಬರು ಹಸೆಮಣೆ ಏರಲಿದ್ದಾರೆ. ಇನ್ನು ಸುಮಂತ್ ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಹಾಗೂ ಬೆಂಗಳೂರಿನಲ್ಲಿ ಬ್ಯುಸಿನೆಸ್ ಮ್ಯಾನ್ ಕೂಡ ಆಗಿದ್ದಾರೆ. ಶುಭಾಪೂಂಜ ಹಾಗೂ ಸುಮಂತ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇದೀಗ ಮನೆಯವರ ಒಪ್ಪಿಗೆಯ ಮೇರೆಗೆ ಇಬ್ಬರು ಸಪ್ತಪದಿ ತುಳಿಯಲು ಸಿದ್ದರಾಗಿದ್ದಾರೆ.