ಮೀ ಟೂ ಸಂಧಾನಕ್ಕೆ ಶ್ರುತಿಯಿಂದ ಕೋಟಿ ಡೀಲ್..!?

0
159

ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಈಗ ಮೀ ಟೂ ಸಂಧಾನಕ್ಕೆ ದುಡ್ಡಿನ ಡಿಮ್ಯಾಂಡ್ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಫಿಲ್ಮ್ ಛೇಂಬರ್ ನಲ್ಲಿ ಸಂಧಾನಕ್ಕಂತ ಅರ್ಜುನ್ ಸರ್ಜಾ ಮತ್ತು ಶ್ರುತಿ ಅವ್ರನ್ನ ಕರೆಯಲಾಗಿತ್ತು. ಆದ್ರೆ, ಅರ್ಜುನ್ ಇದಕ್ಕೆ ಒಪ್ಪಿರ್ಲಿಲ್ಲ. ಶ್ರುತಿ ಬೇಕಾದ್ರೆ ಪತ್ರದ ಮೂಲಕ ಕ್ಷಮೆ ಕೇಳಲಿ ಅಂತ ಸರ್ಜಾ ಫ್ಯಾಮಿಲಿಯವ್ರು ಹೇಳಿದ್ರು. ಈಗ ಸರ್ಜಾ-ಶ್ರುತಿ #MeToo ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅಪರಿಚಿತ ವ್ಯಕ್ತಿಯೊಬ್ಬ ಅರ್ಜುನ್ ಸರ್ಜಾ ಅವ್ರ ಮ್ಯಾನೇಜರ್ ಗೆ ಕಾಲ್ ಮಾಡಿ 1.5 ಕೋಟಿ ರೂ ಕೊಟ್ರೆ ಶ್ರುತಿ ಸಂಧಾನಕ್ಕೆ ಒಪ್ಕೊತ್ತಾರೆ. ಸಂಧಾನಕ್ಕೆ ಬಂದಾಗ ಸ್ವಲ್ಪ ಸಮಾಧಾನವಾಗಿ ಮಾತಾಡಿ ಎಲ್ಲಾ ಸರಿ ಹೋಗುತ್ತೆ ಅಂತ ಹೇಳಿದ್ದಾನೆ. ಇದು ಈಗ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.

LEAVE A REPLY

Please enter your comment!
Please enter your name here