ಮೀ ಟೂ ಎಫೆಕ್ಟ್, ಸಿನಿಮಾದಿಂದ ಶ್ರುತಿಗೆ ಗೇಟ್ ಪಾಸ್..!

0
168
#MeToo ಮೂಲಕ ನಟ ಅರ್ಜುನ್ ಸರ್ಜಾ ಅವ್ರ ವಿರುದ್ಧ ಲೈಂಗಿಕ‌ ಕಿರುಕುಳ ಆರೋಪ ಮಾಡಿರೋ ಶ್ರುತಿ ಹರಿಹರನ್ ಅವ್ರಿಗೆ ಸಿನಿಮಾವೊಂದು ಕೈ ತಪ್ಪಿದೆ. ಮೀಟೂ ಎಫೆಕ್ಟ್ ನಿಂದಾಗಿ ಶ್ರುತಿಗೆ ಮೂವಿಯಿಂದ ಗೇಟ್ ಪಾಸ್ ನೀಡಲಾಗಿದೆ. ಬಿ.ಎಸ್ ಲಿಂಗದೇವರು ಡೈರೆಕ್ಷನ್ ಮಾಡಲಿರೋ ‘ದಾರಿ ತಪ್ಪಿಸು ದೇವರೇ’ ಸಿನಿಮಾದಿಂದ ಶ್ರುತಿ ಅವ್ರನ್ನು ಕೈ ಬಿಡಲಾಗಿದೆ‌. ಆಪರೇಷನ್ ಅಲಮೇಲಮ್ಮ ಸಿನಿಮಾ ಖ್ಯಾತಿ ನಟ ರಿಷಿ ಈ ಚಿತ್ರದ ಹೀರೋ. ನವೆಂಬರ್ ಮೂರನೇ ವಾರದಿಂದ ಶೂಟಿಂಗ್ ನಡೆಯಬೇಕಿತ್ತು‌. ಮೀಟೂ ಜಂಜಾಟದಿಂದ ಬೇಸತ್ತಿರೋ ಶ್ರುತಿ ಅಮೆರಿಕಾ ಫ್ಲೈಟ್ ಹತ್ತೋ ಚಾನ್ಸ್ ಇದೆ. ಶ್ರುತಿ ಹೈಯರ್ ಎಜುಕೇಶನ್ ಗೆ ಅಂತ ಅಮೆರಿಕಾ ಹೋಗ್ತಿದ್ದೀನಿ ಅಂದಿದ್ದಾರಂತೆ.
Chat Conversation End

LEAVE A REPLY

Please enter your comment!
Please enter your name here