ಶ್ರುತಿ ಈ ಕಾರಣಕ್ಕಾಗಿ ಬೆಳಗ್ಗೆಯವರೆಗೆ ವ್ಹೇಟ್ ಮಾಡ್ತಾರಂತೆ..!

0
192

ನಟ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಅವರ #MeToo ರದ್ಧಾಂತ ಸದ್ಯಕ್ಕೆ ಬಗೆಹರಿಯಲ್ಲ ಅನ್ಸುತ್ತೆ. ಕಲಾವಿದರ ಸಂಘದ ಅಧ್ಯಕ್ಷ ರೆಬಲ್ ಸ್ಟಾರ್ ಅಂಬರೀಶ್ ಮುಂದಾಳತ್ವದಲ್ಲಿ ನಡೆದ ಸಭೆಯಲ್ಲಿ ನಿರೀಕ್ಷಿಸಿದ್ದ ಸಂಧಾನ ಸಾಧ್ಯ ಆಗಿಲ್ಲ. ಅರ್ಜುನ್ ಮತ್ತು ಶ್ರುತಿ ಇಬ್ರೂ ಕೂಡ ತಮ್ಮ ಪಟ್ಟು ಸಡಿಸಲಿಲ್ಲ.
ಚಿತ್ರರಂಗದ ಬೇರೆ ಬೇರೆ ವಿಭಾಗದ ಹಿರಿಯರು ಸೇರಿ ಸಂಧಾನ ಮಾಡೋ ಪ್ರಯತ್ನ ಮಾಡಿದ್ರೂ ಬಗೆಹರಿದಿಲ್ಲ.
ಸಭೆ ನಂತ್ರ ಪ್ರೆಸ್ ಮೀಟ್ ನಲ್ಲಿ ಮಾತಾಡಿದ ಶ್ರುತಿ, ನಮ್ ಸೊಸೈಟಿಯಲ್ಲಿ ಏನೇ ಆದ್ರೂ ಹೆಣ್ಣನ್ನೇ ಫಸ್ಟ್ ಬಲಿಪಶು ಮಾಡ್ತಾರೆ. ನಾನು ಛೇಂಬರ್ ಸೂಚನೆಯಂತೆ ಕೋರ್ಟ್ ಗೆ ಹೋಗಿಲ್ಲ. ಆದ್ರೆ ಅರ್ಜುನ್ ಈಗ ನನ್ನ ವಿರುದ್ಧ 2 ಕೇಸ್ ಹಾಕಿದ್ದಾರೆ. ಹಾಕಿರೋ ಕೇಸ್ ವಾಪಸ್ಸು ತಗೋಳಿ ಅಂತ ಮಂಡಳಿ ಹಿರಿಯರು ಅವ್ರಿಗೆ ಹೇಳಿದ್ದಾರೆ. ಅವರು ಏನು ಡಿಸೈಡ್ ಮಾಡ್ತಾರೆ ಅನ್ನೋದನ್ನು ನೋಡ್ಬೇಕು. ನಂಗೆ ಮಂಡಳಿಯವರು ಬೆಳಗ್ಗೆ 10 ಗಂಟೆ ತನಕ ಕಾಯೋಕ್ಕಂತ ಹೇಳಿದ್ದಾರೆ. ಅಷ್ಟೊತ್ತು ಕಾಯ್ತೀನಿ. ಆದ್ರೆ, ಯಾವ್ದೇ ಕಾರಣಕ್ಕೂ ಕ್ಷಮೆ ಕೇಳಲ್ಲ. ನಾನೇಕೆ ಕ್ಷಮೆ ಕೇಳ್ಬೇಕು. ಹಾಗೇ ಕ್ಷಮೆ ಕೇಳೋದೇ ಪರಿಹಾರವಲ್ಲ ಅಂತ ಶ್ರುತಿ ಹೇಳಿದ್ದಾರೆ.

ಸರ್ಜಾ-ಶ್ರುತಿ ವಾರ್ ಗೆ ಟ್ವಿಸ್ಟ್ ; ಈ ರಂಪಾಟದ ಹಿಂದಿದೆ ಇಬ್ಬರು ಹಿರಿಯ ನಟರ ಕೈವಾಡ..?

`ಅಂಬಿ ನಿಂಗೆ ವಯಸ್ಸಾಯ್ತೋ` ಅಂತ ನನ್ನನ್ನು ಸಭೆಗೆ ಕರೆದಿದ್ರು..!

ಕಾಂಪ್ರಮೈಸ್ ಇಲ್ವೇ ಇಲ್ಲ; ಇನ್ನೇನಿದ್ರೂ ಕೋರ್ಟ್ ನಲ್ಲೇ ಮಾತು ಅಂದ ಸರ್ಜಾ

LEAVE A REPLY

Please enter your comment!
Please enter your name here