ಬಾಗಲಕೋಟೆ: ಭಾರತ-ಚೀನಾ ಗಡಿಯಲ್ಲಿ ಸೈನಿಕರ ಮಧ್ಯೆ ಸಂಘರ್ಷ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮೌನವೇಕೆ? ಎಂದು ರಾಹುಲ್ ಟ್ವೀಟ್ಗೆ ಬಾಗಲಕೋಟೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.
ದಳವಾಯಿ ಎನ್ನುವ ಸೈನಿಕ ಹಿಮಾಲಯನ್ ಬ್ಲಂಡರ್ಸ್ ಎನ್ನುವ ಪುಸ್ತಕ ಬರೆದಿದ್ದಾರೆ. ಅವತ್ತಿನ ಭಾರತವಲ್ಲ, ಇದು ನರೇಂದ್ರ ಮೋದಿ ಭಾರತ ಅನ್ನೋದು ಜನಕ್ಕೆ ಅರ್ಥವಾಗಬೇಕು.ಇಡೀ ವಿಶ್ವವೇ ಭಾರತ ಬೆಂಬಲಕ್ಕೆ ನಿಲ್ಲುತ್ತೆ. ಚೀನಾಗೆ ಭಾರತ ತಕ್ಕ ಪಾಠ ಕಲಿಸುವ ತಾಕತ್ತು ಇದೆ. ಹಿಂದೆ ಭಾರತ ಚೀನಾ ಮಧ್ಯೆ ಯುದ್ಧವಾದಾಗ ಭಾರತದ ಪ್ರಧಾನಿ ಲಂಡನ್ನಲ್ಲಿ ವಿಹರಿಸುತ್ತಿದ್ದರು. ಹಿಮಾಲಯನ್ ಬ್ಲಂಡರ್ಸ್ ಎನ್ನುವ ಪುಸ್ತಕದಲ್ಲಿ ಸೈನಿಕರೊಬ್ಬರು ಹೇಳಿದ್ದನ್ನು ಬರೆಯಲಾಗಿದೆ. ಸೈನಿಕ ಕೊನೆಯ ಸೀಸ ಚೀನಾದತ್ತ ಎಸೆದು ಪ್ರಜ್ಞೆ ತಪ್ಪಿ ಬಿದ್ದಾಗ ಈ ದೇಶದ ಪ್ರಧಾನಿ ಲಂಡನ್ನಲ್ಲಿ ವಿಹರಿಸುತ್ತಿದ್ದರು ಎಂದು ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ರು ಸಚಿವ ಕೋಟ ಶ್ರೀನಿವಾಸ ಪೂಜಾರಿ.
ಇನ್ನು ಒಂದು ಕಾಲದಲ್ಲಿ ಕಾಶ್ಮೀರದಲ್ಲಿರೋ ಉಗ್ರಗಾಮಿಗಳು ಘೋಷಣೆ ಹಾಕ್ತಿದ್ರು. ಭಾರತೀಯರೇ, ನಿಮ್ಮ ತಾಯಿಯ ಎದೆಹಾಲು ನೀವು ಕುಡಿದಿದ್ದರೆ, ಬನ್ನಿ ಕಾಶ್ಮೀರದ ಲಾಲ್ಚೌಕ್ನಲ್ಲಿ ಧ್ವಜ ಹಾರಿಸಿ ನೋಡೋಣ ಎಂದು ಸವಾಲ್ ಹಾಕ್ತಿದ್ರು. ಇವತ್ತೇನಾಯ್ತು, ನರೇಂದ್ರ ಮೋದಿ ಪ್ರಧಾನಿಯಾದ ನಂತ್ರ ತ್ರಿವರ್ಣ ಧ್ವಜ ಆ ಚೌಕ್ನಲ್ಲಿ ಅಲ್ಲ, ಇಡೀ ಕಾಶ್ಮೀರದ ಸರ್ಕಾರಿ ಕಚೇರಿಯಲ್ಲಿ ಹಾರುತ್ತಿದೆ. ಅಲ್ಲಿಯ ಮಾಜಿ ಮಂತ್ರಿಗಳು ಹೇಳಿದ್ರು 370 ತೆಗೆದ್ರೆ ರಕ್ತದ ಓಕುಳಿ ಹರಿಯುತ್ತೆ ಅಂತ ಹೇಳಿದ್ರು. ಒಂದೇ ಒಂದು ರಕ್ತದ ಹನಿ ಹೊರಗೆ ಬರಲಿಲ್ಲ, ಎದುರಿಸಲು ಯಾರು ರಸ್ತೆಗೆ ಬರಲಿಲ್ಲ.ಅಂದ್ರೆ ತಾಖತ್ ಇರುವ ಪ್ರಧಾನಿ ಇರುವ ಕಡೆ ಇಂಥಾ ಕೆಲಸಗಳು ಆಗ್ತಾವೆ ಅನ್ನೋದು ಗಮನಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.