Home ಕ್ರೀಡೆ P.Cricket ಯುವಿ - ಧೋನಿ ಬಳಿಕ ಮಿಡಲ್​​ ಆರ್ಡರ್​ಗೆ ಬಲ ತುಂಬಿದ ರಾಹುಲ್ -ಅಯ್ಯರ್..!

ಯುವಿ – ಧೋನಿ ಬಳಿಕ ಮಿಡಲ್​​ ಆರ್ಡರ್​ಗೆ ಬಲ ತುಂಬಿದ ರಾಹುಲ್ -ಅಯ್ಯರ್..!

ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಮೂರೂ ಏಕದಿನ ಪಂದ್ಯಗಳನ್ನು ಸೊತು, ಸರಣಿಯಲ್ಲಿ ವೈಟ್​ವಾಶ್ ಅವಮಾನ ಎದುರಿಸಿದೆ. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕನ್ನಡಿಗ ಮಯಾಂಕ್ ಅಗರ್​​ವಾಲ್ ಮತ್ತು ಏಕದಿನಕ್ಕೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ತಮ್ಮ ಎಂದಿನ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗಿಳಿದ ಕ್ಯಾಪ್ಟನ್ ಕೊಹ್ಲಿ ಕೂಡ ಮಿಂಚಲಿಲ್ಲ! ಆದರೆ ಬಹಕಾಲದಿಂದ ಕಾಡುತ್ತಿದ್ದ 4 ನೇ ಕ್ರಮಾಂಕ ಬಲವಾಗಿದೆ! 4 ಹಾಗೂ 5 ನೇ ಕ್ರಮಾಂಕದಲ್ಲಿ ಯುವ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ ಅಬ್ಬರಿಸಿ, `ಇನ್ನು ನಾವಿರುವ ತನಕ ಮಿಡಲ್​ ಆರ್ಡರ್ ಬಗ್ಗೆ ತಲೆ ಕೆಡಿಸಿಕೊಳ್ಬೇಡಿ’ ಅಂತ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಈ ಜೋಡಿ ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ನಂತರ ಭಾರತದ ಬೆಸ್ಟ್ ಮಧ್ಯಮ ಕ್ರಮಾಂಕದ ಜೋಡಿಯಾಗಿ ಗುರುತಿಸಿಕೊಂಡಿದೆ.
ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಒಂದು ಶತಕ, ಎರಡು ಅರ್ಧಶತಕ ಹಾಗೂ ರಾಹುಲ್ ತಲಾ ಒಂದು ಶತಕ ಮತ್ತು ಅರ್ಧಶತಕ ಸಿಡಿಸಿದ್ದಾರೆ. ಈ ಇಬ್ಬರ ಒಟ್ಟು ರನ್​ಗಳಿಕೆ 421. ಇವರಿಬ್ಬರನ್ನು ಹೊರತುಪಡಿಸಿ ವಿರಾಟ್ ಕೊಹ್ಲಿ ಬಳಗದ ಉಳಿದೆಲ್ಲಾ ಬ್ಯಾಟ್ಸ್​ಮನ್​​ಗಳು ಗಳಿಸಿದ ರನ್​ 423. ಅಂದ್ರೆ ರಾಹುಲ್ -ಅಯ್ಯರ್ ಜೋಡಿಗಿಂತ ಉಳಿದವರ ಗಳಿಕೆ ಕೇವಲ 2ರನ್ ಮಾತ್ರ ಹೆಚ್ಚು.
ಈ ಹಿಂದೆ ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದರು. ಆ ಜೋಡಿ ಬಳಿಕ ಸುರೇಶ್ ರೈನಾ, ಅಂಬಟಿ ರಾಯುಡು, ಕೇದಾರ್ ಜಾಧವ್, ವಿಜಯ್ ಶಂಕರ್, ದಿನೇಶ್ ಕಾರ್ತಿಕ್ ಮೊದಲಾದವರು ಮಿಡಲ್ ಆರ್ಡರಲ್ಲಿ ಬ್ಯಾಟ್ ಬೀಸಿದರೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ಕ್ಲಿಕ್ ಆಗಿರ್ಲಿಲ್ಲ.
ಓಪನಿಂಗ್ ಇರಲಿ, ಮಿಡಲ್ ಆರ್ಡರ್ ಆಗಿರಲಿ ತಾನು ತಂಡಕ್ಕೆ ಆಧಾರವಾಗಬಲ್ಲೆ ಅಂತ ರಾಹುಲ್ ನಿರೂಪಿಸಿದ್ದಾರೆ. 2007ರ ಬಳಿಕ 4 ಮತ್ತು 5ನೇ ಕ್ರಮಾಂಕದ ಇಬ್ಬರೂ ಸರಣಿಯೊಂದರಲ್ಲಿ ಸೆಂಚುರಿ ಬಾರಿಸಿರೋದು ಇದೇ ಮೊದಲು. ಮೊದಲ ಪಂದ್ಯದಲ್ಲಿ ಅಯ್ಯರ್, ಮೂರನೇ ಪಂದ್ಯದಲ್ಲಿ ರಾಹುಲ್ ಸೆಂಚುರಿ ಸಿಡಿಸಿದ್ದಾರೆ. 2007ರಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಯುವರಾಜ್ ಸಿಂಗ್ ಮತ್ತು ಧೋನಿ ಈ ಸಾಧನೆ ಮಾಡಿದ್ದರು.
ಇನ್ನು 2016ರಿಂದ ಇಲ್ಲಿಯವರೆಗೆ ಒಟ್ಟು 91 ಇನ್ನಿಂಗ್ಸ್​ಗಳಲ್ಲಿ ಶ್ರೇಯಸ್ ಅಯ್ಯರ್ ಬಿಟ್ರೆ ಒಟ್ಟು 13 ಆಟಗಾರರು ಬ್ಯಾಟ್ ಬೀಸಿದ್ದಾರೆ. ಅವರೆಲ್ಲರ ಸರಾಸರಿ 35.24ರಷ್ಟು. ಆ 13 ಮಂದಿಯಿಂದ ಬಂದಿರೋದು 3 ಸೆಂಚುರಿ 13 ಹಾಫ್ ಸೆಂಚುರಿ ಮಾತ್ರ. ಆದರೆ, ಶ್ರೇಯಸ್ ಅಯ್ಯರ್ ಇದುವರೆಗೆ 4ನೇ ಕ್ರಮಾಂಕದಲ್ಲಿ ಆಡಿರೋ 8 ಇನ್ನಿಂಗ್ಸ್​​ಗಳಲ್ಲಿ 56.85ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅಯ್ಯರ್​ಗಿಂತ ಮೊದಲು ಆಡಿದ 13 ಮಂದಿ ಒಟ್ಟಾರೆ ಸರಾಸರಿಗಿಂತ ಅಯ್ಯರ್ ಸರಾಸರಿಯೇ ಹೆಚ್ಚು. ಇದರೊಂದಿಗೆ 4ನೇ ಕ್ರಮಾಂಕಕ್ಕೆ ಅಯ್ಯರ್ ರೂಪದಲ್ಲಿ ಭರವಸೆ ಬ್ಯಾಟ್ಸ್​ಮನ್​ ಸಿಕ್ಕಂತಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments