Home ರಾಜ್ಯ ಅಂಗಡಿ ಬಂದ್ ಮಾಡಿ ಜೀವ ಉಳಿಸಿಕೊಳ್ಳಿ : ಕೆ.ಎಸ್. ಈಶ್ವರಪ್ಪ

ಅಂಗಡಿ ಬಂದ್ ಮಾಡಿ ಜೀವ ಉಳಿಸಿಕೊಳ್ಳಿ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಳೆದೊಂದು ವಾರದಿಂದ ಕೋವಿಡ್ ಸೋಂಕು ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ, ಇಂದು ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಜಿಲ್ಲೆಯ ಅಧಿಕಾರಿಗಳು, ಮಾಸ್ಕ್ ಡ್ರೈವ್ ನಡೆಸಿದ್ದಾರೆ.

ಪಾದಯಾತ್ರೆ ವೇಳೆ, ಪ್ರತಿಯೊಬ್ಬ ಸಾರ್ವಜನಿಕರಿಗೂ ಮಾಸ್ಕ್ ಹಾಕಿಕೊಳ್ಳುವಂತೆ ಸಲಹೆ ನೀಡಿದ ಈಶ್ವರಪ್ಪ, ಕೆಲವಾರು ಜನರಿಗೆ ಖುದ್ದು ಅವರೇ ಮಾಸ್ಕ್ ನೀಡಿ ಧರಿಸಿ, ಜೀವ ಉಳಿಸಿಕೊಳ್ಳಿ ಅಂತಾ ಹೇಳಿದ್ದು ವಿಶೇಷವಾಗಿತ್ತು.

ನಗರದ ಪ್ರಮುಖ ರಸ್ತೆಗಳಲ್ಲಿ, ಪಾದಯಾತ್ರೆ ನಡೆಸುವುದರ ಮೂಲಕ, ಪ್ರತಿಯೊಬ್ಬರಿಗೂ ಮಾಸ್ಕ್ ಹಾಕಿಕೊಳ್ಳಿ ಎಂದು ಅಭಿಯಾನ ನಡೆಸುವುದರ ಮೂಲಕ ಜಾಗೃತಿ ಮೂಡಿಸಿದ್ದಾರೆ. ವೀರ ಶಿವಪ್ಪ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಚಿವ ಈಶ್ವರಪ್ಪ ಬಳಿಕ, ಜಿಲ್ಲಾಧಿಕಾರಿ ಶಿವಕುಮಾರ್, ಜಿಲ್ಲಾರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್, ಆಯುಕ್ತ ಚಿದಾನಂದ್ ವಟಾರೆ, ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಸೇರಿದಂತೆ ಹಲವಾರು ಅಧಿಕಾರಿಗಳ ಜೊತೆ ನಗರದ ಜನನಿಬಿಡ ಪ್ರದೇಶವಾದ ಗಾಂಧಿ ಬಜಾರ್ ನಲ್ಲಿ, ಪಾದಯಾತ್ರೆ ನಡೆಸಿದರು.  

ಈ ವೇಳೆ ಮಾತನಾಡಿದ ಸಚಿವ ಈಶ್ವರಪ್ಪ, ವ್ಯಾಪಾರ ಇಲ್ಲ ಎಂದು ಕೊರಗುವ ಬದಲು ಮೊದಲು ಜೀವ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು.  ಜೀವ ಉಳಿಸಿಕೊಂಡರೆ, ಮುಂದಿನ ದಿನಗಳಲ್ಲಿ ವ್ಯಾಪಾರ ಮಾಡಿ ಜೀವನ ನಡೆಸಬಹುದು.  ಜಾಗೃತಿಯಿಂದ ಮನೆಯಲ್ಲೇ ಮನೆಯವರ ಜೊತೆಗೆ ಇರಿ ಅಂತಾ ಸಾರ್ವಜನಿಕರಿಗೆ ಮನವಿ ಮಾಡಿದರು. ವ್ಯತಿರಿಕ್ತ ಪರಿಣಾಮವಾಗಬಾರದೆಂದು ಇದುವರೆಗೂ ಲಾಕ್ ಡೌನ್ ಮಾಡಿಲ್ಲ. ಕೋವಿಡ್ ಪರಿಸ್ಥಿತಿ ನೋಡಿದರೆ ಗಾಬರಿಯಾಗುತ್ತಿದೆ. ದೆಹಲಿಯಲ್ಲಿ ನನಗೆ ಬೇಕಾದ ಒಬ್ಬ ವ್ಯಕ್ತಿಗೆ ಆಕ್ಸಿಜನ್, ಬೆಡ್ ಕೊಡಿಸಲು ಆಗಲಿಲ್ಲ. ಆದರೆ, ಕೋವಿಡ್ ಬಗ್ಗೆ ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಜಾಗೃತಿಯಾಗಿದೆ ಅಂತಾ ಹೇಳಿದರು.

LEAVE A REPLY

Please enter your comment!
Please enter your name here

- Advertisment -

Most Popular

ಸೋಂಕಿತನ ಅಂತ್ಯಕ್ರಿಯೇ ನೆರವೇರಿಸಿದ ಮುಸಲ್ಮಾನ್ ಯುವಕರು..!  

ಶಿವಮೊಗ್ಗ : ಕೊರೋನಾದಿಂದ ಸಾವನಪ್ಪಿದವನಿಗೆ, ಕುಟುಂಬಸ್ಥರು, ಮತ್ತು ನೆರೆಹೊರೆಯವರು, ಅಂತ್ಯಕ್ರಿಯೇ ಮಾಡಲು ಹಿಂಜರಿದ ಹಿನ್ನೆಲೆಯಲ್ಲಿ, ಮುಸಲ್ಮಾನ್ ಯುವಕರೇ ನಿಂತು ಅಂತ್ಯಕ್ರಿಯೇ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಶಿವಮೊಗ್ಗದ  ಶಿರಾಳಕೊಪ್ಪದಲ್ಲಿಯೇ ಈ ಘಟನೆ ನಡೆದಿದ್ದು, ಇಲ್ಲಿನ...

ಲಾಕ್ ಡೌನ್ ವೇಳೆಯೇ ಅರಣ್ಯ ಲೂಟಿಗೆ ಯತ್ನಿಸಿದ ಖದೀಮರು..!

ಶಿವಮೊಗ್ಗ : ಇತ್ತ ರಾಜ್ಯದೆಲ್ಲೆಡೆ ಲಾಕ್ ಡೌನ್ ಘೋಷಣೆಯಾಗಿದೆ. ಅದೆಷ್ಟೊ ಜನರು ಮನೆ ಸೇರಿಕೊಂಡಿದ್ದರೆ, ಮತ್ತೆ ಕೆಲವರು ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ.  ಇನ್ನೂ ಕೆಲವರು ಹೇಗಪ್ಪಾ ಲಸಿಕೆ ಪಡೆದುಕೊಳ್ಳೋದು ಎಂಬ ಯೋಚನೆಯಲ್ಲಿದ್ದಾರೆ. ಆದ್ರೆ ಇಲ್ಲಿನ...

‘ನನ್ನಿಂದ ಮನೆಯವರೆಗೂ ಸೋಂಕು ತಗುಲಿದೆ ಎಂದು ತಹಶೀಲ್ದಾರ್ ಸೂಸೈಡ್’

ಚಿಕ್ಕಮಗಳೂರು: ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೋನ ಬಂತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು...

ಮನೆ, ಮನೆಗೆ ಹಾಲು ವಿತರಣೆಗೆ ಪೊಲೀಸರ ಅಡ್ಡಿ..!  

ಶಿವಮೊಗ್ಗ: ನಗರ ಪ್ರದೇಶದ ಮನೆಮನೆಗಳಿಗೆ ಹಾಲು ಮಾರಾಟ ಮಾಡುವ ರೈತರಿಗೂ ಬಿಡದೇ ಪೊಲೀಸರು, ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.  ಹಾಲು, ತರಕಾರಿ ಮನೆಮನೆಗೆ ತೆರಳಿ ಮಾರಾಟ ಮಾಡಬಹುದು ಎಂದು ಜಿಲ್ಲಾಡಳಿತ ಸೂಚನೆ...

Recent Comments