Sunday, May 29, 2022
Powertv Logo
Homeರಾಜ್ಯಸಿಎಂ ಜೊತೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾದವರಿಗೆ ಶಾಕ್..!

ಸಿಎಂ ಜೊತೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾದವರಿಗೆ ಶಾಕ್..!

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೊವಿಡ್ ಸೋಂಕು ದೃಡ ಪಟ್ಟಿದೆ. ಸಿಎಂ ಜೊತೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾದವರಿಗೆ ಶಾಕ್ ಕಾದಿದೆ. ಸಿಎಂ ಬಿಎಸ್ ಯಡಿಯೂರಪ್ಪ ಟ್ರಾವೆಲ್ ಹಿಸ್ಟ್ರಿ ಬೆಚ್ಚಿ ಬೀಳಿಸುವಂತಿದೆ.

ಏಪ್ರಿಲ್ 10 ರಿಂದ 15 ರವಗೆ ಉಪ ಚುನಾವಣೆ ಹಿನ್ನಲೆಯಲ್ಲಿ ಪ್ರಚಾರ ನಡೆಸಿದ್ದಾರೆ. ಏಪ್ರಿಲ್ 10. 11 ರಂದು ರಾಯಚೂರಿನ ಮಸ್ಕಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಏ. 11, 12 ರಂದು ಬೀದರ್ ನ ಬಸವಕಲ್ಯಾಣದಲ್ಲಿ ಪ್ರಚಾರ. ಏ.13, 14, 15 ರಂದು ಬೆಳಗಾವಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಚಾರ ಮಾಡಿದ್ದಾರೆ.  

ಪ್ರಚಾರದ ವೇಳೆ ಗುರುವಾರ ಹುಕ್ಕೇರಿಯಲ್ಲಿ ಸುಮಾರು 70 ಸ್ವಾಮೀಜಿಗಳ ಜೊತೆ ಹೋಮದಲ್ಲಿ ಭಾಗಿಯಾಗಿದ್ದಾರೆ. ಮತ್ತು ಹಲವು ನಾಯಕರ ಬೇಟಿ, ಹಲವು ಸ್ವಾಮೀಜಿಗಳ ಜೊತೆ ಚರ್ಚೆ ಮಾಡಿದ್ದಾರೆ.

ಇಂದು ಬೆಳಿಗ್ಗೆ ಕೊವಿಡ್ ನಿಯಂತ್ರಣದ ಸಂಬಂಧ ಸಚಿವರು, ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಲಕ್ಷಣ್ ಸವದಿ, ಬಸವರಾಜ್ ಬೊಮ್ಮಾಯಿ, ಸಚಿವರಾದ ಉಮೇಶ್ ಕತ್ತಿ, ಆರೋಗ್ಯ ಸಚಿವ ಸುಧಾಕರ್, ಶ್ರೀರಾಮುಲು, ಹೆಬ್ಬಾರ್, ಸಚಿವರಾದ ಮುರುಗೇಶ್ ನಿರಾಣಿ, ಶ್ರೀಮಂತ್ ಪಾಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಶಾಸಕ ಅನಿಲ್ ಬೆನಕೆ ಸಹ ಸಿಎಂ ಸಂಪರ್ಕದಲ್ಲಿದ್ದರು.

 

19 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments