Saturday, May 21, 2022
Powertv Logo
Homeರಾಜ್ಯಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ : ಶೋಭಾ ಕರಂದ್ಲಾಜೆ

ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ : ಶೋಭಾ ಕರಂದ್ಲಾಜೆ

ಉಡುಪಿ : ಭಯೋತ್ಪಾದಕರು ಬೆಂಬಲ ಕೊಡುವ ರೀತಿಯಲ್ಲಿ, ಭಾರತದಲ್ಲಿ ಏನೋ ನಡೆಯುತ್ತಿದೆ ಎನ್ನುವಂತೆ ಬಿಂಬಿಸಲು ಹೊರಟಿದ್ದಾರೆ ಎಂದು ಸಚಿವ ಶೋಭಾ ಕರಂದ್ಲಾಜೆ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಜಾಬ್​​ಗೆ ಸಂಬಂಧಿಸಿದಂತೆ ಹೈಕೋರ್ಟ್ ಸಮವಸ್ತ್ರ ಧರಿಸಿ ಬರಬೇಕೆಂದು ಸ್ಪಷ್ಟ ನಿರ್ಧಾರ ತಿಳಿಸಿದೆ. ರಾಜ್ಯ ಸರಕಾರದ ಶಿಕ್ಷಣ ಇಲಾಖೆ ಕೂಡ ಇದನ್ನೇ ಹೇಳಿದೆ. ಹೈಕೋರ್ಟ್ ಆದೇಶ ಮೀರಿ ಕೆಲವರು ಹಿಜಾಬ್‌ಗೆ ಬೆಂಬಲ ಕೊಡುತ್ತಿದ್ದಾರೆ. ಈ ದೇಶದ ನೆಲದ ಕಾನೂನನ್ನು ಪಾಲನೆ ಮಾಡುವುದಿಲ್ಲ ಎಂದು ಮನಬಂದಂತೆ ನಡೆದುಕೊಳ್ಳುತ್ತೇವೆ ಅನ್ನೋದನ್ನ ಸಾಬೀತು ಮಾಡಿದ್ದಾರೆ ಎಂದು ಕಿಡಿಕಾರಿದರು.

ಅದುವಲ್ಲದೇ ಪೊಲೀಸರಿಗೆ ಗೌರವ ಕೊಡಲ್ಲ, ಸರ್ಕಾರಕ್ಕು ಗೌರವ ಕೊಡುವುದಿಲ್ಲ. ಪೊಲೀಸ್ ವ್ಯವಸ್ಥೆ ಮೇಲೆ ದೌಜನ್ಯ ಮಾಡ್ತಾರೆ, ಪೊಲೀಸ್ ಠಾಣೆ ಮೇಲೆ ದಾಳಿ ಮಾಡ್ತಾರೆ.ಇದು ಅವರ ಮಾನಸಿಕತೆ, ದೇಶದಲ್ಲಿ ಎಲ್ಲರೂ ಒಟ್ಟಾಗಿ ಬದುಕಬೇಕು ಅನ್ನೋದು ನಮ್ಮ ಸಂಕಲ್ಪ. ನಮ್ಮ ಹೆಣ್ಣು ಮಕ್ಕಳಿಗೆ ಬೇಕಾದದ್ದು ಶಿಕ್ಷಣ, ಶಿಕ್ಷಣ ಪಡೆದು ಅವರ ಕಾಲ ಮೇಲೆ ಅವರು ನಿಲ್ಲಬೇಕು. ಹಾಲ್ ಟಿಕೆಟ್ ಪಡೆದು ಪರೀಕ್ಷೆ ಬರೆಯದೇ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಇದು ಸರಿಯಲ್ಲ, ಎಲ್ಲರೂ ಪರೀಕ್ಷೆ ಬರೆಯಬೇಕು ಪದವಿ ಪಡೆದು ಅವರ ಕಾಲ ಮೇಲೆ ಅವರು ನಿಲ್ಲಬೇಕು ಎಂದರು.

ಇನ್ನು ನಿಮ್ಮ ಹಿಂದೆ ನಿಂತ ಸಂಘಟನೆ, ಬದುಕಿನಲ್ಲಿ ಬರೋದಿಲ್ಲ. ಸುಮ್ಮನೇ ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಇದು ಇಲ್ಲಿ ನಡೆಯೋದಿಲ್ಲ ಇಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆ. ಎಂದು ಉಡುಪಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

- Advertisment -

Most Popular

Recent Comments