ವಿಶ್ವಕಪ್ ನಲ್ಲಿಂದು ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಹಾಗೂ ಆ್ಯರೋನ್ ಫಿಂಚ್ ಮುಂದಾಳತ್ವದ ಆಸ್ಟ್ರೇಲಿಯಾ ನಡುವೆ ಮ್ಯಾಚ್ ನಡೆಯುತ್ತಿದೆ.
ಓವೆಲ್ ಮೈದಾನದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಪಂದ್ಯ ಆರಂಭಕ್ಕೂ ಮುನ್ನ, ಟಾಸ್ ಆಗುವ ಮುಂಚೆಯೇ ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಕ್ತರ್ ಭವಿಷ್ಯ ನುಡಿದಿದ್ದಾರೆ. ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಪಂದ್ಯದಲ್ಲಿ ಭಾರತದ ಗೆಲುವು ಖಚಿತ ಅನ್ನೋದು ಅಕ್ತರ್ ಅವರ ಭವಿಷ್ಯ.
ಯೂಟ್ಯೂಬ್ ವಿಡಿಯೋದಲ್ಲಿ ಅಕ್ತರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ಬ್ಯಾಟ್ಸ್ಮನ್ ಗಳು ಮ್ಯಾಚ್ ವಿನ್ ಮಾಡಿಸಲು ಸಿದ್ಧರಾಗಿದ್ದಾರೆ. ಬ್ಯಾಟ್ಸ್ಮನ್ಗಳು ರನ್ ಮಳೆಗರೆದರೆ, ಬೌಲರ್ಗಳು ವಿಕೆಟ್ ಉರುಳಿಸಲು ರೆಡಿಯಾಗಿದ್ದಾರೆ ಎಂದಿದ್ದಾರೆ. ಜೊತೆಗೆ ಟೀಮ್ಗೆ ಶುಭ ಹಾರೈಸಿದ್ದಾರೆ.