ಟೂರಿಂಗ್ ಟಾಕೀಸ್ 18ರವರೆಗೆ, ಆ ಮೇಲೆ ಸುಮಕ್ಕನೂ ಇಲ್ಲ ಪಮಕ್ಕಾನೂ ಇಲ್ಲ: ಶಿವರಾಮೇ ಗೌಡ ವಾಗ್ದಾಳಿ

0
181

ಮಂಡ್ಯ: ಈಗ ಎಲ್ಲಾ ಫಿಲ್ಮಿ ಸ್ಟೈಲ್​ನಲ್ಲಿ ನಡೀತಿದೆ. ಸುಮಲತಾ ಟೂರಿಂಗ್ ಟಾಕೀಸ್ ಹದಿನೆಂಟನೇ ತಾರೀಕಿನವರೆಗೂ ನಡೆಯುತ್ತೆ. ಆ ಮೇಲೆ ಸುಮಕ್ಕನೂ ಇಲ್ಲ ಪಮಕ್ಕಾನೂ ಇಲ್ಲ ಅಂತ ಸಂಸದ ಎಲ್. ಆರ್. ಶಿವರಾಮೇಗೌಡ ಹೇಳಿದ್ದಾರೆ.

ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಿವರಾಮೇಗೌಡ ಅವರು ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಅಂಬರೀಶ್ ವಸತಿ ಸಚಿವರಾಗಿದ್ದಾಗ ಬಡವರಿಗೆ ಯಾಕ್ ಮನೆ ಕೊಡಿಸ್ಲಿಲ್ಲ..? ಆಗ ಗೌರಮ್ಮನ ಹಾಗೆ ಮನೆಲಿದ್ಬುಟ್ಟು, ಈಗ ಬಂದವ್ಳೇ ಈಯಮ್ಮ. ಇವರೆಲ್ಲಾ ಟೂರಿಂಗ್​ ಟಾಕೀಸ್​. ಇಲ್ಲಿ ಫಿಲ್ಮಿ ಶೂಟಿಂಗ್​ ನಡೀತಿದೆ. ಆಮೇಲೆ ಇವ್ರನ್ನೆಲ್ಲಾ ಹುಡುಕಲು ಗಾಂಧಿನಗರಕ್ಕೆ ಹೋಗ್ಬೇಕು. ಆಮೇಲೆ ಅವರನ್ನ ನೋಡಲು ಗಾಂಧಿನಗರಕ್ಕೆ ಹೋಗಬೇಕಾಗುತ್ತೆ. ಹುಡಕಲು ನೀವೆಲ್ಲಾ ಅಲ್ಲಿಗೆ ಹೋಗ್ತಿರಾ ಹೇಳೀ..? ಅಂತ ಪ್ರಶ್ನಿಸಿದ್ದಾರೆ.

ನಟ ದರ್ಶನ್​, ಯಶ್​, ರಾಕ್​ಲೈನ್​ ವಿರುದ್ಧವೂ ಶಿವರಾಮೇಗೌಡ ಅವರು ವಾಗ್ದಾಳಿ ನಡೆಸಿದ್ದು, “ದರ್ಶನ್ ನಾಯ್ಡು, ಸುಮಲತಾ ನಾಯ್ಡು, ರಾಕ್​ಲೈನ್ ವೆಂಕಟೇಶ್​ ಕೂಡ ನಾಯ್ಡು. ಮಂಡ್ಯ ನಾಯ್ಡುಮಯ ಮಾಡಲು ಬಿಡಬಾರದು. ಅವನ್ಯಾರೋ ರಾಕ್ ಲೈನ್ ಅಂತೆ. ಇವತ್ತು ದರ್ಶನ್ ಬಂದಿದ್ದಾನಲ್ಲಾ..? ಇವನೂ ನಾಯ್ಡು, ಸುಮಲತಾ ನಾಯ್ಡು ರಾಕ್ ಲೈನ್ ಮೆಂಟೇಶನ್ ನಾಯ್ಡು. ಲೇ ಗೌಡ್ರು ಕತೆ ಏನಾಗಬೇಕ್ರೋ? ಅವಳ ಗಂಡನ ನಂಬಿಕೊಂಡೆ ನಾನು 20 ವರ್ಷ ಹಾಳು ಮಾಡ್ಕೊಂಡೆ. 20 ವರ್ಷ ಅಧಿಕಾರ ವಂಚಿತರಾಗಿ ಕೂರಲು ಈ ಪುಣ್ಯಾತ್ಮನ ಪಾರ್ಟಿಗೆ ಕರೆತಂದ್ದು ಕಾರಣ” ಅಂತ ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here