ಟ್ವಿಟರ್​​ಗೆ ಶಿವಣ್ಣ ಎಂಟ್ರಿ : ‘ಸೇಫ್​’ ಅಂತ ಟ್ವೀಟ್​ ಮಾಡಿದ್ದೇಕೆ ಕರುನಾಡ ಚಕ್ರವರ್ತಿ?

0
205

ಸಾಮಾನ್ಯವಾಗಿ ಎಲ್ಲಾ ಸ್ಟಾರ್​​ಗಳು ಟ್ಟಿಟರ್, ಫೇಸ್​ಬುಕ್​, ಇನ್ಸ್​ಟಾಗ್ರಾಮ್​ನಲ್ಲಿ ಆ್ಯಕ್ಟೀವ್​​ ಆಗಿರ್ತಾರೆ. ಅಭಿಮಾನಿಗಳ ಮುಂದೆ ಸೋಶಿಯಲ್​ ಮೀಡಿಯಾ ಮುಖೇನ ಬರ್ತಿರ್ತಾರೆ. ಆದರೆ, ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆ್ಯಕ್ಟಿವ್ ಆಗಿರ್ಲಿಲ್ಲ. ಇದೀಗ ಅವರು ಟ್ವಿಟರ್​ಗೆ ಎಂಟ್ರಿಕೊಟ್ಟಿದ್ದಾರೆ. ಮೊದಲ ಟ್ವೀಟ್​​ನಲ್ಲೇ ‘ಸೇಫ್’ ಅಂದಿದ್ದಾರೆ..!
ಹೌದು, ಶಿವಣ್ಣ ಸದ್ಯ ಲಂಡನ್​ನಲ್ಲಿದ್ದಾರೆ. ಬಲಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ನಾಳೆ (ಜುಲೈ 12) ಅವರ ಹುಟ್ಟುಹಬ್ಬ. ಪ್ರತಿವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ತಿದ್ರು. ಆದರೆ, ಈ ಬಾರಿ ಲಂಡನ್​ನಲ್ಲಿರುವುದರಿಂದ ಅವರು ಅಭಿಮಾನಿಗಳೊಡನೆ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡೋಕೆ ಆಗ್ತಿಲ್ಲ. ಆದ್ದರಿಂದ ಫೇಸ್​ಬುಕ್​ ಲೈವ್ ಮೂಲಕ ಅಭಿಮಾನಿಗಳ ಜೊತೆ ಮಾತಾಡಲು ನಿರ್ಧರಿಸಿದ್ದಾರೆ.
”ನಿಮ್ಮೆಲರ ಪ್ರೀತಿ ಹಾರೈಕೆ ಆಪರೇಷನ್ successful and ನಿಮ್ಮ ಶಿವಣ್ಣ safe. ನಾನಿನ್ನು ಲಂಡನ್ನಲ್ಲೆ ಇರುವ ಕಾರಣ ಈ ಹುಟ್ಟುಹಬಕ್ಕೆ ನಿಮ್ಮೆಲ್ಲರನ್ನು ತುಂಬಾ ಮಿಸ್ ಮಾಡಿಕೊಳ್ಳುವೆ. ಆದಷ್ಟು ಬೇಗ ವಾಪಸ್ ಬರುವೆ, ಹಾಗೆ ಇಂದು ಮಧ್ಯರಾತ್ರಿ 12ಕ್ಕೆ ನನ್ನ official facebook pageನಲ್ಲಿ LIVE ಬರುವೆ ”ಎಂದು ಶಿವಣ್ಣ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here