ಶಿವಣ್ಣನ ಹುಟ್ಟುಹಬ್ಬಕ್ಕೆ ಲಂಡನ್​​ನಲ್ಲಿ ಸರ್​​ಪ್ರೈಸ್​ ಆಗಿ ಸಿಕ್ಕ ಫೇವರೇಟ್​ ಕ್ರಿಕೆಟರ್..!

0
334

ನಿನ್ನೆ, ಅಂದ್ರೆ ಜುಲೈ 12 ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್​ 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ವರ್ಷ ತನ್ನ ಫ್ಯಾನ್ಸ್​ ಜೊತೆ ಬರ್ತ್​ಡೇ ಸೆಲೆಬ್ರೇಟ್ ಮಾಡಿಕೊಳ್ತಿದ್ದ ಶಿವಣ್ಣ ಈ ಬಾರಿ ಲಂಡನ್​​ನಲ್ಲಿರೋದ್ರಿಂದ ಅಲ್ಲೇ ಸಹೋದರ ಪವರ್ ಸ್ಟಾರ್ ಪುನೀತ್ ಜೊತೆ ಸಿಂಪಲ್ಲಾಗಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ್ರು.
ಬಲ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿರೋ ಅವರು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಶಿವಣ್ಣ ಲಂಡನ್​ನಲ್ಲಿದ್ರೂ ಫ್ಯಾನ್ಸ್ ಬಹಳ ಪ್ರೀತಿಯಿಂದ ಅವರ ಬಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.
ಇನ್ನು ಲಂಡನ್​ನಲ್ಲಿರುವ ಶಿವಣ್ಣಗೆ ಸರ್​​ಪ್ರೈಸ್ ಆಗಿ ಅವರ ಫೇವರೇಟ್ ಕ್ರಿಕೆಟರ್​ ಸಿಕ್ಕಿದ್ದಾರೆ..! ಹೆಮ್ಮೆಯ ಕನ್ನಡಿಗ, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಅನಿಲ್ ಕುಂಬ್ಳೆ ಶಿವಣ್ಣರನ್ನು ಭೇಟಿಯಾದವರು. ಈ ಬಗ್ಗೆ ಫೋಟೊ ಶೇರ್ ಮಾಡಿ ಟ್ವೀಟ್ ಮಾಡಿದ್ದಾರೆ ಶಿವಣ್ಣ.
”ಕ್ರಿಕೆಟ್ ಅಂದ್ರೆ ನನಗೆ ಇಷ್ಟ, ಅದರಲ್ಲೂ ನಮ್ಮ ಕನ್ನಡದ ಕ್ರಿಕೆಟ್ ಆಟಗಾರರು ಅಂದ್ರೆ ನನಗೆ ಪ್ರೀತಿ ಜಾಸ್ತಿ. ನನ್ನ ಹುಟ್ಟುಹಬ್ಬಕ್ಕೆ surprise ಆಗಿ ಸಿಕ್ಕ ನನ್ನ favorite player ನನ್ನ ಒಳ್ಳೆಯ ಸ್ನೇಹಿತ @anilkumble1074 ನಿಮ್ಮ ಭೇಟಿ ಖುಷಿ ಕೊಡ್ತು”ಅಂತ ಶಿವಣ್ಣ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here