ಬರ್ತ್​ ಡೇ ದಿನ ಶಿವಣ್ಣ ಲಂಡನ್​ನಲ್ಲಿ ಇರ್ತಾರೆ..! ಕಾರಣ ಏನ್ ಗೊತ್ತಾ?

0
214

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೊ ಶಿವರಾಜ್​ಕುಮಾರ್ ಅವರು ಈ ಬಾರಿ ಹುಟ್ಟುಹಬ್ಬದ ದಿನ ಫ್ಯಾನ್ಸ್​ಗೆ ಸಿಕ್ತಾ ಇಲ್ಲ..! ನೆಚ್ಚಿನ ನಟನ ಬರ್ತ್​ಡೇಯನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡ್ಬೇಕು ಅಂತ ಪ್ಲಾನ್ ಮಾಡ್ಕೊಂಡಿರೋ ಫ್ಯಾನ್ಸ್​​ಗೆ ಇದು ನಿಜಕ್ಕೂ ಬೇಸರದ ಸುದ್ದಿ. ಆದ್ರೆ, ಶಿವಣ್ಣ ಅನಿವಾರ್ಯವಾಗಿ ಆ ದಿನ ಲಂಡನ್​ನಲ್ಲಿ ಇರ್ಲೇ ಬೇಕು.
ಹೌದು, ಜುಲೈ 12ರಂದು ಶಿವರಾಜ್​ಕುಮಾರ್ ಅವ್ರ ಹುಟ್ಟುಹಬ್ಬ. ಅಂದು ಶಿವಣ್ಣ ಬೆಂಗಳೂರಲ್ಲಿ ಇರಲ್ಲ. ಇಂಗ್ಲೆಂಡ್​​ನಲ್ಲಿ ಇರ್ತಾರೆ. ಭುಜದ ನೋವಿನಿಂದ ಬಳಲುತ್ತಿರೋ ಶಿವಣ್ಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಹೀಗಾಗಿ ಜುಲೈ 9ರಂದು ಲಂಡನ್​ಗೆ ಹೋಗಲಿದ್ದಾರೆ. ಹೆಚ್ಚು-ಕಮ್ಮಿ 1 ತಿಂಗಳ ಕಾಲ ಅವ್ರು ಅಲ್ಲೇ ಇರ್ಬೇಕಾಗಿರೋದ್ರಿಂದ ಈ ಬಾರಿ ಫ್ಯಾನ್ಸ್​ ಜೊತೆ ಬರ್ತ್​ ಡೇ ಸೆಲಬ್ರೇಷನ್ ಮಾಡ್ಕೋಳ್ಳದನ್ನು ಮಿಸ್ ಮಾಡಿಕೊಳ್ತಾ ಇದ್ದಾರೆ.
ಇನ್ನು ಶಿವಣ್ಣ ರುಸ್ತುಂ, ಆನಂದ್​, ದ್ರೋಣ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಭಜರಂಗಿ-2 ಮೂವಿಯ ಫಸ್ಟ್​ ಶೆಡ್ಯೂಲ್ ಕಂಪ್ಲೀಟ್ ಮಾಡಿ, ಲಂಡನ್​ಗೆ ಪ್ರಯಾಣ ಬೆಳೆಸಲಿದ್ದಾರೆ.

LEAVE A REPLY

Please enter your comment!
Please enter your name here