ಮಂಡ್ಯ ಸ್ಟಾರ್​ವಾರ್​ ಬಗ್ಗೆ ಶಿವಣ್ಣ ಹೇಳಿದ್ದೇನು..?

0
263

ಶಿವಮೊಗ್ಗ: ಪ್ರಚಾರದ ಸಮಯದಲ್ಲಿ ಸಿನಿಮಾ ನಟರು ವ್ಯಯಕ್ತಿಕ ಹೇಳಿಕೆಗಳನ್ನು ನೀಡುವುದು ಅವರವರ ಇಷ್ಟ. ಆದರೆ, ಮಾತನಾಡುವ ಸಂದರ್ಭದಲ್ಲಿ, ಹುಷಾರಾಗಿ ಬಹಳ ಎಚ್ಚರಿಕೆಯಿಂದ ಮಾತನಾಡ ಬೇಕು ಅಂತ ನಟ ಶಿವರಾಜ್​ ಕುಮಾರ್ ಹೇಳಿದ್ದಾರೆ.

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​ ಅವರು ಮಂಡ್ಯದಲ್ಲಿ ನಡೆಯುತ್ತಿರುವ ಸ್ಟಾರ್ ವಾರ್ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ.  “ದಯವಿಟ್ಟು ಯಾರು, ಯಾರ ಮೇಲೂ ಭಿನ್ನಾಭಿಪ್ರಾಯ ಬಾರದಂತೆ ಮಾತನಾಡಿ.  ನಾನು ಕೇವಲ ಸಲಹೆ ನೀಡಿದ್ದೇನೆ ಅಷ್ಟೆ.  ಆದರೆ, ಅದನ್ನ ತೆಗೆದುಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ನಾನು ರಾಜಕೀಯ ವಿಚಾರಗಳನ್ನು ಹೆಚ್ಚಾಗಿ ನೋಡಲು ಹೋಗುವುದೇ ಇಲ್ಲ. ನನಗೆ ಎಲ್ಲಾ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here