ಶಿವಣ್ಣ ಲಾಂಗ್ ಹಿಡಿದ್ರೆ ನಾನು ಹಿಂದೆ ನಿಂತಿರ್ತೀನಿ ಅಂದ್ರು ದರ್ಶನ್..!

0
279

ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವರನಟ ಡಾ. ರಾಜ್​ಕುಮಾರ್ ಕುಟುಂಬದ ಕುಡಿ ಧ್ರುವನ್ ನಾಯಕ ನಟನಾಗಿ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಡ್ತಿರೋ ಹಾಗೂ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್​ ಅಭಿನಯದ  ಸಿನಿಮಾ ಮಹೂರ್ತಕ್ಕೆ ಶಿವಣ್ಣ ಮತ್ತು ದರ್ಶನ್ ಆಗಮಿಸಿದ್ರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ‘ಶಿವಣ್ಣ ಲಾಂಗ್ ಹಿಡಿದ್ರೆ ನಾನು ಹಿಂದೆ ನಿಂತಿರ್ತೀನಿ’ ಅಂತ ಹೇಳಿದ್ರು.
ಶಿವಣ್ಣ ಮತ್ತು ದರ್ಶನ್ ಒಟ್ಟಿಗೆ ಮಾತಿಗೆ ಸಿಕ್ಕಾಗ, ನೀವಿಬ್ರು ಒಂದೇ ಸಿನಿಮಾದಲ್ಲಿ ನಟಿಸ್ತೀರಾ ಅನ್ನೋ ಪ್ರಶ್ನೆ ಎದುರಾಯ್ತು. ಆಗ ಶಿವಣ್ಣ ಅಂತಹದ್ದೊಂದು ಅವಕಾಶ ಸಿಕ್ರೆ ಖಂಡಿತಾ ಮಾಡ್ತೀವಿ. ನಾವಾಗಿಯೇ ಮಾಡ್ತೀವಿ ಅಂತ ಹೋಗ್ಬಾರ್ದು. ಅದಾಗೇ ಬರ್ಬೇಕು. ಖಂಡಿತಾ ಅದು ಸಾಧ್ಯವಾಗುತ್ತೆ. ನಾವಿಬ್ರು ಒಟ್ಟಿಗೆ ಸಿಕ್ಕಾಗೆಲ್ಲಾ ಈ ಬಗ್ಗೆ ಅನೇಕ ಬಾರಿ ಮಾತನಾಡಿದ್ದೀವಿ ಅಂತ ಹೇಳಿದ್ರು. ಲಾಂಗ್ ಯಾರು ಹಿಡೀತೀರಾ ಅಂದಾಗ ಶಿವಣ್ಣ ಇಬ್ರೂ ಹಿಡಿತೀವಿ ಅಂದ್ರು.. ಆಗ ದರ್ಶನ್ ಅಲ್ಲ ಅಲ್ಲ… ಅವ್ರು ಹಿಡಿತಾರೆ..ನಾನು ಹಿಂದೆ ನಿಂತಿರ್ತೀನಿ ಅಂತ ಹೇಳಿದ್ರು. ಅಲ್ಲದೆ ನಮ್ಮನ್ನು ಹ್ಯಾಂಡಲ್ ಮಾಡೋ ಡೈರೆಕ್ಟರ್ ಸಿಕ್ಕಿಲ್ಲ. ಅಂತಹದ್ದೊಂದು ಕತೆ ತಗೊಂಡು ಬರ್ಲಿ. ಖಂಡಿತಾ ಸಿನಿಮಾ ಮಾಡ್ತೀವಿ ಎಂದರು,
ಶಿವಣ್ಣ ಮತ್ತು ಸುದೀಪ್ ಕಾಂಬಿನೇಷನ್​ನಲ್ಲಿ ‘ದಿ ವಿಲನ್’ ಸಿನಿಮಾ ಬಂದಿದೆ. ಇದೀಗ ಶಿವಣ್ಣ ಮತ್ತು ದಚ್ಚು ಕಾಂಬಿನೇಷನ್​ನ ಸಿನಿಮಾಕ್ಕೆ ಅಭಿಮಾನಿಗಳು ಕಾಯ್ತಿದ್ದಾರೆ. ಶಿವಣ್ಣ, ದರ್ಶನ್ ಕೂಡ ಒಂದೊಳ್ಳೆ ಕಥೆ ಸಿಕ್ರೆ ಸಿನಿಮಾ ಮಾಡೋ ಇಂಗಿತ ವ್ಯಕ್ತಪಡಿಸಿದ್ದು, ಆ ಕಾಲ ಆದಷ್ಟು ಬೇಗ ಕೂಡಿ ಬರ್ಲಿ ಅನ್ನೋದೇ ಅಭಿಮಾನಿಗಳಾ ಆಶಯ.

ಶಿವಣ್ಣ ಲಾಂಗ್ ಹಿಡಿದ್ರೆ ನಾನು ಹಿಂದೆ ನಿಂತಿರ್ತೀನಿ ಅಂದ್ರು ದರ್ಶನ್..!

ಶಿವಣ್ಣ ಲಾಂಗ್ ಹಿಡಿದ್ರೆ ನಾನು ಹಿಂದೆ ನಿಂತಿರ್ತೀನಿ ಅಂದ್ರು ದರ್ಶನ್..! #Shivarajkumar #Darshan

Posted by Powertvnews on Friday, November 22, 2019

 

LEAVE A REPLY

Please enter your comment!
Please enter your name here