ಶಿವಮೊಗ್ಗ : ರೈತ ವಿರೋಧಿ ಕಾಯ್ದೆಗಳನ್ನ ವಿರೋಧಿಸಿ ಮತ್ತು ಕೊರೋನಾ ನಿಯಂತ್ರಣದಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಮತ್ತು ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾಂಗ್ರೆಸ್ಸಿಗರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಎಪಿಎಂಸಿ, ಕಾರ್ಮಿಕ ವಿರೋಧಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಎಲ್ಲ ಕಾಯ್ದೆಗಳು ರೈತರ ವಿರೋಧಿಗಳೇ ಆಗಿವೆ. ಇದರಿಂದ ಖಾಸಗಿ ಬಂಡವಾಳದಾರರಿಗೆ ಅನುಕೂಲವಾಗುತ್ತದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಯಾವ ಅನುಕೂಲವೂ ಆಗುವುದಿಲ್ಲ. ಸಂಪೂರ್ಣ ಶೋಷಣೆಗೆ ಒಳಗಾಗುತ್ತಾರೆ ಎಂದು ದೂರಿದ್ದಾರೆ. ಇನ್ನು ಕೈಗಾರಿಕಾ ಉದ್ಯಮಗಳು ಕಾರ್ಮಿಕ ಕಾಯ್ದೆಯಿಂದ ನಾಶ ಹೊಂದುತ್ತವೆ. ಕಾರ್ಮಿಕರು ಬೀದಿಪಾಲಾಗುತ್ತಾರೆ. ಅವರು ಅತಂತ್ರ…