Home ರಾಜ್ಯ ತಮಿಳುನಾಡಿನಲ್ಲಿದ್ದ ನಕ್ಸಲ್ ಶೋಭಾಳನ್ನು ಶಿವಮೊಗ್ಗದ ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

ತಮಿಳುನಾಡಿನಲ್ಲಿದ್ದ ನಕ್ಸಲ್ ಶೋಭಾಳನ್ನು ಶಿವಮೊಗ್ಗದ ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

ಶಿವಮೊಗ್ಗ : ತಮಿಳುನಾಡು ಪೊಲೀಸರ ವಶದಲ್ಲಿದ್ದ ಹೊಸನಗರ ಮೂಲದ ನಕ್ಸಲ್ ಮಹಿಳೆಯನ್ನು ಶಿವಮೊಗ್ಗದ ತೀರ್ಥಹಳ್ಳಿ ನ್ಯಾಯಾಲಯಕ್ಕೆ ಕರೆತಂದು ಹಾಜರುಪಡಿಸಲಾಗಿದೆ. ನಕ್ಸಲ್ ಶೋಭಾ (34) ಎಂಬ ಯುವತಿ ಈಕೆಯಾಗಿದ್ದು, ಈಕೆ ಹೊಸನಗರ ತಾಲೂಕಿನ ಯಡೂರು ಸಮೀಪದ ಉಳಿಗಾ ಗ್ರಾಮದ ಬಳಿ ಮೇಲುಸುಂಕದವಳೆಂದು ಹೇಳಲಾಗಿದೆ. ಕಳೆದ ಹಲವಾರು ವರ್ಷಗಳ ಕಾಲ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಈಕೆ ವಿರುದ್ಧ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅಂದಹಾಗೆ, ತಮಿಳುನಾಡಿನ ಕೊಯಮತ್ತೂರಿನ ಸ್ಪೆಷಲ್ ಬ್ರ್ಯಾಂಚ್ ಪೊಲೀಸರ ವಶದಲ್ಲಿದ್ದ ಈಕೆಯನ್ನ ಬಿಗಿ ಭದ್ರತೆಯಲ್ಲಿ ಕರೆತರಲಾಗಿದ್ದು, ಎ.ಎನ್.ಎಫ್. ಭದ್ರತೆಯಲ್ಲಿ ತೀರ್ಥಹಳ್ಳಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನೂ ಕೆಲವಾರು ದಿನಗಳ ಕಾಲ ವಿಚಾರಣೆಗಾಗಿ ಈಕೆಯನ್ನು ಶಿವಮೊಗ್ಗದ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಅಷ್ಟಕ್ಕೂ, 2012 ರಲ್ಲಿ ನಕ್ಸಲರ ತಂಡವೊಂದು, ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಬರ್ಕಣ ಜಲಪಾತದ ಬಳಿ ಪೊಲೀಸರ ಮೇಲೆ ಫೈರಿಂಗ್ ಮಾಡಿತ್ತು. ಈ ತಂಡದಲ್ಲಿ ಶೋಭಾ ಕೂಡ ಇದ್ದಳು ಎಂಬ ಆರೋಪವಿದ್ದು, ಈ ಪ್ರಕರಣದ ವಿಚಾರಣೆಗಾಗಿ ತೀರ್ಥಹಳ್ಳಿಯ ನ್ಯಾಯಾಲಯಕ್ಕೆ ಈಕೆಯನ್ನು ಇದೀಗ ಕರೆತರಲಾಗಿದೆ. ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಹಿನ್ನೆಲೆಯಲ್ಲಿ, ಕೊಯಮತ್ತೂರಿನ ತಡಗಂ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ, ಕಳೆದ ಮಾರ್ಚ್ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ, ಶೋಭಾಳನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರಂತೆ. ಇದೀಗ ಶಿವಮೊಗ್ಗದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ತೀರ್ಥಹಳ್ಳಿಗೆ ವಿಚಾರಣೆಗಾಗಿ ಕರೆತರಲಾಗಿದೆ. ಇನ್ನು ಗೌಪ್ಯ ಸ್ಥಳದಲ್ಲಿ ಈಕೆಯನ್ನು ಬಂಧಿಸಿಡಲಾಗಿದ್ದು, ವಿಚಾರಣೆ ಮುಂದುವರೆದಿದೆ.

LEAVE A REPLY

Please enter your comment!
Please enter your name here

- Advertisment -

Most Popular

ನಿರಂತರ ಜ್ಯೋತಿ ಯೋಜನೆಯಲ್ಲಿ ಅವ್ಯವಹಾರ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ನಿರಂತರ ಜ್ಯೋತಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಕುರಿತು ಸೂಕ್ತ ಕ್ರಮ ಜರುಗಿಸಿ ಎಂದು...

‘ಪಿಬಿ ರಸ್ತೆ ಮೇಲ್ದರ್ಜೆಗೆ ಏರಿಸುವಂತೆ ಗಬ್ಬೂರು ಬೈಪಾಸ್ ಬಂದ್’

ಹುಬ್ಬಳ್ಳಿ: ಪುಣಾ-ಬೆಂಗಳೂರ ಬೈಪಾಸ್ ರಸ್ತೆಯು ಕಿರಿದಾಗಿದ್ದು, ಇದರಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಗಬ್ಬೂರು ಬೈಪಾಸ್ ಗೆ...

ಜ. 26 ರಂದು ಪರ್ಯಾಯ ರೈತ ಗಣರಾಜ್ಯೋತ್ಸವ ಪರೆಡ್: ಶಾಂತಕುಮಾರ

ಹುಬ್ಬಳ್ಳಿ : ದೆಹಲಿ ರೈತರ ಹೋರಾಟ ಬೆಂಬಲಿಸಿ ಜ. 26 ರಂದು ರೈತರ ಪರ್ಯಾಯ ಗಣರಾಜ್ಯೋತ್ಸವ ಪರೆಡ್ ಹಮ್ಮಿಕೊಳ್ಳಲಾಗಿದೆ. ಅಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ , ಮೋಟಾರ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ...

‘ಠಾಕ್ರೆ ಟ್ವೀಟ್ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ’

ಬೆಂಗಳೂರು: ಮಾಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಟ್ವೀಟ್ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಧರಣಿ ನಡೆಸುತ್ತಿವೆ. ಉದ್ದವ್ ಠಾಕ್ರೆ ಭೂತದಹನ...

Recent Comments