ರಸ್ತೆಯಲ್ಲಿ ಕಸ ಎತ್ತಿ ಮಾದರಿಯಾದ್ರು ಶಿವಮೊಗ್ಗ ಜಿಲ್ಲಾಧಿಕಾರಿ..!

0
192

ಶಿವಮೊಗ್ಗ : ಜಿಲ್ಲಾಧಿಕಾರಿ ದಯಾನಂದ್ ಅವರು ರಸ್ತೆಯಲ್ಲಿ ಬಿದ್ದಿರುವ ಕಸ ಎತ್ತುವ ಮೂಲಕ ಪರಿಸರ ಕಾಳಜಿ ಮೆರೆಯುವುದರ ಜೊತೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶಿವಮೊಗ್ಗದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಪರಿಸರ ದಿನಾಚರಣೆ ಅಂದ್ರೆ ಕೇವಲ, ಸಸಿಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆಯುವುದಷ್ಟೇ ಅಲ್ಲ, ಬದಲಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕೂಡ ಸ್ವಚ್ಛವಾಗಿಟ್ಟುಕೊಳ್ಳಬೇಕೆನ್ನುವ ದಯಾನಂದ್ ಅವರು, ತಾವೇ ಖುದ್ದು ರಸ್ತೆಗಿಳಿದು, ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಕಸ ಮತ್ತು ಇತರೆ ಬೇಡವಾದ ವಸ್ತುಗಳನ್ನು ತೆಗೆದರು.
ಇನ್ನು ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ಮಹಾನಗರಪಾಲಿಕೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕೇವಲ ಸಸಿಗಳನ್ನು ನೆಟ್ಟರೆ ಸಾಲದು, ಅದಕ್ಕೆ ಸರಿಯಾದ ಸಮಯದಲ್ಲಿ, ನೀರುಣಿಸಿ, ಪೋಷಿಸುವ ಜವಬ್ದಾರಿ ಕೂಡ ಹೊರಬೇಕು. ಇದು ನಮ್ಮೆಲ್ಲರ ಜವಬ್ದಾರಿ ಕೂಡ ಹೌದು. ಅಲ್ಲದೇ, ಪರಿಸರ ಉಳಿಸುವ ನಿಟ್ಟಿನಲ್ಲಿ, ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಬೇಕು. ಜೊತೆಗೆ, ನಮ್ಮ ನಮ್ಮ ಮನೆ ಮತ್ತು ಮನೆ ಮುಂಭಾಗದ ಪರಿಸರ ಸರಿಯಾಗಿಟ್ಟುಕೊಂಡರೆ, ಇಡೀ ದೇಶವೇ ಸ್ವಚ್ಛವಾಗಿರುತ್ತದೆ’ ಅಂದ್ರು.

LEAVE A REPLY

Please enter your comment!
Please enter your name here