ಹುಣಸೋಡು ಕ್ರಷರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪವರ್ ಟಿವಿ ಗೆ ಮಹತ್ವದ ಸುಳಿವೊಂದು ದೊರೆತಿದೆ. ಪವರ್ ಟಿವಿ ಗೆ ಉನ್ನತ ಮೂಲದಿಂದ ಮಹತ್ವದ ಮಾಹಿತಿ ಲಭ್ಯವಾಗಿದೆ. ಅಂದಹಾಗೆ, ಬ್ಲಾಸ್ಟ್ ಆದ ವಾಹನದಲ್ಲಿ ಎಷ್ಟು ಪ್ರಮಾಣದಲ್ಲಿ ಇತ್ತು ಗೊತ್ತಾ ಸ್ಫೋಟಕ ಸಾಮಾಗ್ರಿ……!?
ಈ ಮಾಹಿತಿ ಕೇಳಿದ್ರೆ ನಿಜಕ್ಕು ನೀವು ಬೆಚ್ಚಿ ಬೀಳ್ತಿರಾ……!
ಹೌದು ಜ. 21 ರ ರಾತ್ರಿ ಸ್ಫೋಟವಾದ ಆ ವಾಹನದಲ್ಲಿತ್ತು ಬರೋಬರಿ 15 ಸಾವಿರಕ್ಕೂ ಅಧಿಕ ಜಿಲೇಟಿನ್ ಕಡ್ಡಿಗಳು….ಹೌದು, 15 ಸಾವಿರ ಜಿಲೆಟಿನ್ ಕಡ್ಡಿಗಳ ಜೊತೆ, ಆ ವಾಹನದಲ್ಲಿತ್ತು 3 ಟನ್ ನಷ್ಟು ಡಿಟೋನೆಟರ್ ಗಳು….ಎಸ್, ಗಣಿ ಉದ್ಯಮ ನಡೆಸುವವರೇ ಹೇಳುವ ಹಾಗೆ ಒಂದೇ ಒಂದು ಜಿಲೇಟಿನ್ ಕಡ್ಡಿಯಿಂದ 100 ಟನ್ ಗೂ ಅಧಿಕ ಕಲ್ಲು ಹೊರತೆಗೆಯುವ ಸಾಮರ್ಥ್ಯ ಇರುತ್ತಂತೆ. ಹೀಗಿರುವಾಗ 15 ಸಾವಿರ ಜಿಲೇಟಿನ್ ಕಡ್ಡಿಗಳು ಏಕಕಾಲದಲ್ಲಿ ಸ್ಫೋಟಗೊಂಡರೆ ಏನಾಗಬೇಡ…..!? ಈ ಪ್ರಮಾಣದ ಸ್ಫೋಟಕ ಸಾಮಾಗ್ರಿ ಇದ್ದಿದ್ದಕ್ಕೆ ಸುಮಾರು 50 -60 ಕಿ.ಮೀ ವ್ಯಾಪ್ತಿಯವರೆಗೆ ಶಬ್ದ ಕೇಳಿಸಲು ಸಾಧ್ಯ. ಅದರಲ್ಲೂ ರಾತ್ರಿವೇಳೆಯಲ್ಲಿ ನೂರಕ್ಕೂ ಹೆಚ್ಚು ಕಿ.ಮೀ. ವ್ಯಾಪ್ತಿಯವರೆಗೆ ಈ ಶಬ್ಧ ಕೇಳಿಸುತ್ತದೆ.
ಇನ್ನು ತಜ್ಞರ ತನಿಖೆಯ ಬಳಿಕವಷ್ಟೇ ಈ ಎಲ್ಲದರ ಬಗ್ಗೆ ಮಾಹಿತಿ ಇನ್ನೂ ಹೊರ ಬರಲಿದ್ದು, ಮಾಹಿತಿ ಪ್ರಕಾರ ಶಿವಮೊಗ್ಗಕ್ಕೆ ಒಂದು ವಾರಕ್ಕೆ ಸುಮಾರು 5 ಲಾರಿಗಳಷ್ಟು, ಸ್ಫೋಟಕ ಸಾಮಾಗ್ರಿಗಳು ಶಿವಮೊಗ್ಗಕ್ಕೆ ಪ್ರವೇಶಿಸುತ್ತವಂತೆ. ಈಗಲಾದರೂ ಈ ಅಕ್ರಮಕ್ಕೆ ಬ್ರೇಕ್ ಬೀಳುತ್ತಾ ಕಾದು ನೋಡಬೇಕಿದೆ.