Friday, October 7, 2022
Powertv Logo
Homeದೇಶನಾಳೆಯಿಂದ ಶಿರಡಿ ದೇವಾಲಯ ಬಂದ್​ - ಭಕ್ತರಿಗಿಲ್ಲ ಸಾಯಿಬಾಬಾ ದರ್ಶನ!

ನಾಳೆಯಿಂದ ಶಿರಡಿ ದೇವಾಲಯ ಬಂದ್​ – ಭಕ್ತರಿಗಿಲ್ಲ ಸಾಯಿಬಾಬಾ ದರ್ಶನ!

ಶಿರಡಿ : ಶ್ರೀ ಸಾಯಿಬಾಬಾ ಜನ್ಮಸ್ಥಳದ ಕುರಿತಾಗಿ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ  ನೀಡಿರುವ ವಿವಾದಾತ್ಮಕೆ ಹೇಳಿಕೆಯನ್ನು ವಿರೋಧಿಸಿ, ಶಿರಡಿ ದೇವಾಲಯದ ಆಡಳಿತ ಮಂಡಳಿ ಭಾನುವಾರದಿಂದ ಅನಿರ್ದಿಷ್ಟಾವಧಿ ದೇವಾಲಯ ಬಂದ್​ ಮಾಡಲು ನಿಶ್ಚಯಿಸಿದೆ.

ಇತ್ತೀಚೆಗೆ ಫರ್ಬಾನಿಯಾ ಪತ್ರಿಯ  ಅಭಿವೃದ್ಧಿಗೆ 100 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಮಾತನಾಡಿದ್ದ  ಉದ್ಧವ್​ ಠಾಕ್ರೆ, ಶ್ರೀ ಸಾಯಿಬಾಬಾ ಜನ್ಮಸ್ಥಳ ಫರ್ಬಾನಿಯಾ ಪತ್ರಿ  ಎಂಬ  ಹೇಳಿಕೆ ನೀಡಿದ್ದರು.  ಇದಕ್ಕೆ ವಿರೋಧ ವ್ಯಕ್ತಪಡಿಸಿ ಶಿರಡಿ ದೇವಾಲಯದ ಆಡಳಿತ ಮಂಡಳಿ ದೇವಾಲಯವನ್ನು ತೆರಯದಿರಲು  ನಿರ್ಧರಿಸಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿರುವ ಸಾಯಿಬಾಬಾ ಸಂಸ್ಥಾನ ಟ್ರಸ್ಟ್​ನ ಬಾವು ಸಾಹೇಬ್​ ವಕ್ಟಾರೆ, ಸಾಯಿಬಾಬಾ ಜನ್ಮಸ್ಥಳದ ಬಗ್ಗೆ ಮುಖ್ಯಮಂತ್ರಿಗಳು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಶನಿವಾರ ಸ್ಥಳಿಯರೊಂದಿಗೆ ಸಭೆ ನಡೆಸಿ ಭಾನುವಾರದಿಂದ ಅನಿರ್ದಿಷ್ಟಾವಧಿವರೆಗೆ ಶಿರಡಿ ದೇವಾಲಯವನ್ನು ಬಂದ್​ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಫರ್ಬಾನಿ ಜಿಲ್ಲೆಯ ಅಭಿವೃದ್ಧಿಯ ಕುರಿತು ಮಾತನಾಡುವ ಸಂದರ್ಭದಲ್ಲಿ, ಫರ್ಬಾನಿಯಾ ಪತ್ರಿ ಸಾಯಿಬಾಬಾ ಅವರ ಜನ್ಮಸ್ಥಳವಾಗಿದೆ. ಇದನ್ನು ಅಭಿವೃದ್ಧಿಪಡಿಸಿ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸುವ ಬಗ್ಗೆ ಹೇಳಿದ್ದರು.  ಇದರಿಂದ ಶಿರಡಿ ದೇವಾಲಯ ಮಂಡಳಿ ತೀವ್ರ  ಅಸಮಾಧಾನಗೊಂಡಿದೆ. 

 

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments