ಕುಂದಾಪುರದ ಕುವರ, ನಟ ಶೈನ್ ಶೆಟ್ಟಿ ಕನ್ನಡ ಬಿಗ್ಬಾಸ್ ಸೀಸನ್ 7ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. 113 ದಿನಗಳ ‘ದೊಡ್ಮನೆ’ ಜರ್ನಿಯನ್ನು ಯಶಸ್ವಿಯಾಗಿ ಮುಗಿಸಿ 17 ಕಂಟೆಸ್ಟ್ಗಳ ಎದುರು ಶೈನ್ ‘ಬಿಗ್ಬಾಸ್’ ಪಟ್ಟ ಅಲಂಕರಿಸಿದ್ದು, ಟ್ರೋಫಿಯೊಂದಿಗೆ 50 ಲಕ್ಷ ಗೆಲುವಿನ ಹಣ ಮತ್ತು 11 ಲಕ್ಷ ರೂ ಹೆಚ್ಚುವರಿಯಾಗಿ ಒಟ್ಟು 61 ಲಕ್ಷ ರೂ ಪಡೆದಿದ್ದಾರೆ. ಗೆಲುವಿನ ಖುಷಿಯಲ್ಲಿ ಕನ್ನಡಿಗರಿಗೆ ಶೈನ್ ಧನ್ಯವಾದ ಸಮರ್ಪಿಸಿದ್ದಾರೆ. ಹಾಸ್ಯ ನಟ ಕುರಿ ಪ್ರತಾಪ್ ರನ್ನರಪ್ ಆಗಿ ಹೊರಹೊಮ್ಮಿದ್ದಾರೆ.