Home ರಾಜ್ಯ ‘ಹಾಲು ಉತ್ಪಾದಕರಿಗೆ ಶಿಮೂಲ್ ನಿಂದ ಸಂಕ್ರಾಂತಿ ಕೊಡುಗೆ’

‘ಹಾಲು ಉತ್ಪಾದಕರಿಗೆ ಶಿಮೂಲ್ ನಿಂದ ಸಂಕ್ರಾಂತಿ ಕೊಡುಗೆ’

ಶಿವಮೊಗ್ಗ: ಸಂಕಷ್ಟದಲ್ಲಿದ್ದ ಹಾಲು ಉತ್ಪಾದಕರಿಗೆ ಇದೀಗ ಶಿಮೂಲ್ ಸಂಕ್ರಾಂತಿಯ ಗಿಫ್ಟ್ ನೀಡಿದೆ.  ಕೊರೋನಾ ಕಾಟದಿಂದಾಗಿ, ಸಂಕಷ್ಟದಲ್ಲಿದ್ದ ಹಾಲಿನ ಮಾರಾಟದ ಕ್ಷೇತ್ರ ಈಗ ಚೇತರಿಕೆ ಕಂಡಿದ್ದು, ಈ ನಿಟ್ಟಿನಲ್ಲಿ ಹಾಲು ಉತ್ಪಾದಕರಿಗೆ ದರ ಹೆಚ್ಚಳ ಮಾಡಿ ಆದೇಶ ಮಾಡಲಾಗಿದೆ. 

ಕೊರೋನಾ ಕಾಟದ ಪರಿಣಾಮವಾಗಿ, ಹಾಲಿನ ಮಾರಾಟದಲ್ಲಿ, ಶೇ. 50 ರಷ್ಟು ಕುಸಿದಿತ್ತು.  ಆದರೆ, ಈಗ ಬದಲಾದ ಪರಿಸ್ಥಿತಿಯಲ್ಲಿ, ಹಾಲು ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದ್ದು, ಹೀಗಾಗಿ ಹಾಲು ಉತ್ಪಾದಕರಿಗೆ ನೀಡಲಾಗುವ ದರ ಹೆಚ್ಚಳ ಮಾಡಲಾಗಿದೆ. ಇದು ಶಿಮೂಲ್ ನಿಂದ ರೈತರಿಗೆ ಸಂಕ್ರಾಂತಿ ಕೊಡುಗೆ ನೀಡಲು ಬಯಸಿದಂತಾಗಿದೆ. ಫೆಬ್ರವರಿ ತಿಂಗಳಲ್ಲಿ, ಶಿವಮೊಗ್ಗ, ದಾವಣಗೆರೆ, ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ರಾಜ್ಯದಲ್ಲಿಯೇ, ಅತ್ಯಧಿಕ ಅಂದರೆ, ಲಿ. ಗೆ, 28 ರೂ. ನೀಡಿತ್ತು. ಆದರೆ, ಕೋವಿಡ್ ನಿಂದಾಗಿ ಮಾರಾಟ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಇದೀಗ ಮಾರಾಟ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಹೀಗಾಗಿ ರೈತರಿಗೆ ನೀಡಲಾಗುವ ದರದಲ್ಲಿ ಹೆಚ್ಚಳ ಮಾಡಲಾಗಿದೆ.

ಆದರೆ, ಗ್ರಾಹಕರ ಮೇಲೆ ಇದರಿಂದ ಯಾವುದೇ ಹೊರೆ, ಬೀಳುವುದಿಲ್ಲ. ಕಾರಣ, ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯನ್ನು ಒಳಗೊಂಡಿರುವ ಶಿಮೂಲ್ ಪ್ರತಿ ಲೀ. ಗೆ 2.75 ರೂ.  ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ವರದನಾವಾಗಿದೆ. ಶಿಮೂಲ್ ಮುಖ್ಯ ಕಚೇರಿಯಲ್ಲಿ ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಹೊಸ ದರ ಜನವರಿ 13 ರಿಂದ ಅನ್ವಯವಾಗಲಿದೆ. ಅಂದಹಾಗೆ, ಈ ನೂತನ ದರ ಜ. 13 ರಿಂದ ಜಾರಿಗೆ ಬರಲಿದ್ದು, ಇದುವರೆಗೂ ಲೀ. ಗೆ 22.50 ಇದ್ದು, ಇನ್ನು ಮುಂದೆ 2.75 ರೂ. ಹೆಚ್ಚಳದಿಂದಾಗಿ, 25.25 ರೂ. ಏರಿಕೆಯಾದಂತಾಗಿದೆ. ಇದರ ಜೊತೆಗೆ, ಸರ್ಕಾರದ ಪ್ರೋತ್ಸಾಹ ಧನ 5 ರೂ. ಪ್ರತ್ಯೇಕವಾಗಿ ಸಿಗಲಿದೆ.  ಇದು ಶಿಮೂಲ್ ನ ಪ್ರಮುಖ ನಿರ್ಧಾರವಾಗಿದ್ದು, ಸಂಕಷ್ಟದಲ್ಲಿದ್ದ ರೈತರು, ಸಂಕ್ರಾಂತಿಗೆ ನಿಟ್ಟುಸಿರು ಬಿಡುವಂತಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

‘ಗದಗನಲ್ಲಿ ಕಾಲೇಜ್ ಓಪನ್ ರೂಲ್ಸ್ ಬ್ರೇಕ್’

ಗದಗ: 10 ತಿಂಗಳ ನಂತರ ರಾಜ್ಯದಲ್ಲಿ ಪದವಿ ಕಾಲೇಜುಗಳು ಸಂಪೂರ್ಣ ಆರಂಭವಾಗಿವೆ. ಆದರೆ ಗದಗ ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸರ್ಕಾರದ ಕೊರೋನಾ ರೂಲ್ಸ್ ಗಳು ಪಾಲನೆ ಆಗುತ್ತಿಲ್ಲ. ಚಿಕ್ಕ...

‘ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆ’

ಗದಗ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಗದಗ ಜಿಲ್ಲೆಯಲ್ಲಿ ಕೂಡ ನಿಧಿ ಸಂಗ್ರಹಣೆ ಕಾರ್ಯ ನಡೆಯಿತು. ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆಗೆ ಮುಂದಾಗಿದ್ದಾರೆ. ನಗರದ ಜೋಡು ಮಾರುತೇಶ್ವರ ದೇವಸ್ಥಾನದಲ್ಲಿ...

ಸಿಎಂ ಅವರ ಸಿಡಿ ಇದ್ರೆ ಕೊಡಿ, ಸುಮ್ನೆ ಹೆದರಿಸುವದು ಏಕೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ರಾಜಕಾರಣದಲ್ಲಿ ಆಸೆ ಇರುವದು ತಪ್ಪಲ್ಲ. ಆದರೆ ಬಹಿರಂಗ ಹೇಳಿಕೆ ನೀಡುವದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಶಾಸಕ ಅಸಮಾಧಾನವನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ಆದರೆ...

‘ಹುಬ್ಬಳ್ಳಿ ಚನ್ನಮ್ಮ ವೃತ್ತದ ಮೇಲು ರಸ್ತೆ ನಿರ್ಮಾಣ ಶಿಲಾನ್ಯಾಸ’

ಹುಬ್ಬಳ್ಳಿ: 298 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 63, 218 ಹಾಗೂ 4 ನ್ನು ಸಂಪರ್ಕಿಸುವ 3.6 ಕೀ.ಮೀ ಉದ್ದದ ಚೆನ್ನಮ್ಮ ವೃತ್ತದ ಮೇಲು ರಸ್ತೆ, 25 ಕೋಟಿ ವೆಚ್ಚದಲ್ಲಿ ಕಲಘಟಗಿ ರಾಷ್ಟ್ರೀಯ...

Recent Comments