19 ರೂಗೆ ಈರುಳ್ಳಿ ಸಿಗುತ್ತೆ ಅಂತ ಮಾಲ್​ಗೆ ಹೋದವರಿಗೆ ಕಾದಿತ್ತು ಶಾಕ್!

0
218

ಈರುಳ್ಳಿಗಾಗಿ ಸ್ಪಾರ್ ನಲ್ಲಿ ವಾರ್ ನಡೆದಿದೆ. ಶಿವಮೊಗ್ಗದ ಬಿ.ಹೆಚ್. ರಸ್ತೆಯ ಬೇರಿಸ್ ಮಾಲಿನಲ್ಲಿನ ಸ್ಪಾರ್ ಸೂಪರ್ ಮಾರ್ಕೆಟಿನಲ್ಲಿ ಗಲಾಟೆ ನಡೆದಿದ್ದು, ಸ್ಪಾರ್ ಸೂಪರ್ ಮಾರ್ಕೆಟ್ ಸಿಬ್ಬಂದಿ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಈ ಸ್ಪಾರ್ ಸೂಪರ್ ಮಾರ್ಕೆಟಿನವರು 19 ರೂಗೆ 1 ಕೆ.ಜಿ. ಈರುಳ್ಳಿ ಕೊಡ್ತೀವಿ ಅಂತ ಕೂಪನ್ ಪ್ರಿಂಟ್ ಮಾಡಿಸಿ, ಗ್ರಾಹಕರಿಗೆಲ್ಲಾ ಹಂಚಿದ್ದಾರೆ. ಈ ಕೂಪನ್ ನೋಡಿದ್ದೇ ತಡ ಗ್ರಾಹಕರೆಲ್ಲರೂ ಎದ್ನೋಬಿದ್ನೋ ಅಂತ ಮಾಲಿಗೆ ಓಡಿ ಬಂದಿದ್ದಾರೆ. ವಯಸ್ಸಾದವರು, ಹೆಣ್ಣು ಮಕ್ಕಳೆಲ್ಲಾ ಹೆಚ್ಚು ದರ ನೀಡಿ ಆಟೋ ಮಾಡಿಕೊಂಡು, ಈ ಮಾಲತ್ತ ದೌಡಾಯಿಸಿದ್ರು. ಆದ್ರೆ ಮಾಲಿಗೆ ಎಂಟ್ರಿ ಕೊಡ್ತಿದ್ದಂತೆ ಈ ಗ್ರಾಹಕರಿಗೆಲ್ಲಾ ಶಾಕ್ ಕಾದಿತ್ತು.
ಗ್ರಾಹಕರಿಗೆ, ಸಿಬ್ಭಂದಿ 19 ರೂ ನ ಕೂಪನ್​​​ನಲ್ಲಿರೋ ಸ್ಟಾರ್ ಮಾರ್ಕ್ ತೋರ್ಸಿದ್ದಾರೆ. ನಿಬಂಧನೆಗಳು ಅಪ್ಲೇ ಆಗುತ್ತೆ. ನೀವು ಸರಿಯಾಗಿ ನೋಡ್ಕೋ ಬೇಕು. 19 ರೂ. ಗೆ 1 ಕೆ.ಜಿ ಈರುಳ್ಳಿ ಬೇಕು ಅಂದ್ರೆ, 50 ರೂ. ಸಾಮಾಗ್ರಿ ಖರೀದಿ ಮಾಡ್ಬೇಕು. ಅದರಲ್ಲೂ ನಿಮಗೆ ಕೊಡೋದು ಕೇವಲ ಒಂದೇ ಕೆ.ಜಿ ಈರುಳ್ಳಿ ಅಂದಿದ್ದಾರೆ. ಹೀಗಾಗಿ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಗಲಾಟೆಯಾಗಿದೆ.

LEAVE A REPLY

Please enter your comment!
Please enter your name here