Home ರಾಜ್ಯ ‘ವಾಮಾಚಾರದ ಮೂಲಕ ಮತದಾರರ ಮತ ಸೆಳೆಯಲು ಶಿವಮೊಗ್ಗದಲ್ಲಿ ತಂತ್ರ’

‘ವಾಮಾಚಾರದ ಮೂಲಕ ಮತದಾರರ ಮತ ಸೆಳೆಯಲು ಶಿವಮೊಗ್ಗದಲ್ಲಿ ತಂತ್ರ’

ಶಿವಮೊಗ್ಗ: ಊರು-ಮನೆ-ಕೇರಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿನ ಮಂತ್ರ – ವಾಮಾಚಾರದ ಮೂಲಕ ಮತದಾರರ ಮತ ಸೆಳೆಯಲು ತಂತ್ರ. – ಭಯಭೀತಿಯಲ್ಲಿ ಓತಿಘಟ್ಟ ಗ್ರಾಮಸ್ಥರು.

ಗ್ರಾ. ಪಂ. ಚುನಾವಣೆ ಬಿಸಿ ಇದೀಗ ಗ್ರಾಮಾಂತರ ಭಾಗಗಳಲ್ಲಿ ತಾರಕ್ಕೇರಿದೆ.  ಇಷ್ಟು ದಿನ ಗ್ರಾಮಸ್ಥರೆಲ್ಲರೂ ಒಂದೇ ಎಂದು ಕೊಂಡಿದ್ದ ಜನರಲ್ಲಿ ಇದೀಗ ಬಣಗಳು ಕಾಣಸಿಗುತ್ತಿದ್ದು, ಚುನಾವಣೆಯಲ್ಲಿ ತಮ್ಮದೇ ಅಭ್ಯರ್ಥಿ ಗೆಲ್ಲಬೇಕೆಂಬ ಪಣತೊಟ್ಟು ಎಲ್ಲಾ ರೀತಿಯ ಕಸರತ್ತು ಮಾಡತೊಡಗಿದ್ದಾರೆ.  ಗ್ರಾಮಾಂತರ ಭಾಗಗಳಲ್ಲಿ ಬಣ ರಾಜಕೀಯ ಕಂಡು ಬರುತ್ತಿದ್ದು, ನೇರವಾಗಿ ಪಕ್ಷಗಳು ಅಖಾಡದಲ್ಲಿ ಇಲ್ಲದೇ ಹೋದರೂ, ಪಕ್ಷಗಳ ಪರ ಅಭ್ಯರ್ಥಿ ಎಂದು ಗುರುತಿಸಲಾಗುತ್ತಿದೆ.  ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ, ನಾನಾ ಕಸರತ್ತಿನಲ್ಲಿ ತೊಡಗಿಕೊಂಡಿರುವ ಅಭ್ಯರ್ಥಿಗಳು ತಾವೇ ಗೆಲ್ಲಬೇಕೆಂಬ ಹಠದಿಂದಾಗಿ, ವಾಮಾಚಾರಕ್ಕೂ ಮುಂದಾಗಿರುವುದು ಬೆಳಕಿಗೆ ಬಂದಿದೆ.

ಹೌದು, ಶಿವಮೊಗ್ಗದ ಓತಿಘಟ್ಟ ಗ್ರಾಮದಲ್ಲಿ ಮನೆಗಳ ಮುಂದೆ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದ್ದು, ಜನರು ಗಾಬರಿಗೊಂಡಿರುವುದು ಒಂದೆಡೆಯಾದರೆ, ಮತ್ತೊಂದೆಡೆ, ವಾಮಾಚಾರ ಮಾಡಿಸಿರುವವರ ವಿರುದ್ಧ ಆಕ್ರೋಶ ಕೂಡ ಹೊರ ಹಾಕಿದ್ದಾರೆ.  ಶಿವಮೊಗ್ಗದ ನಿದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓತಿಘಟ್ಟ ಗ್ರಾಮದಲ್ಲಿ ಸುಮಾರು 250 ಮನೆಗಳಿದ್ದು, ಮನೆಗಳ ಮುಂದೆ, ಈ ರೀತಿ ಕುಂಕುಮಗಳನ್ನು ಚೆಲ್ಲಿ ವಾಮಾಚಾರ ನಡೆಸಿರುವುದು ಬೆಳಕಿಗೆ ಬಂದಿದ್ದು, ಅಲ್ಲಲ್ಲಿ, ನಿಂಬೆಹಣ್ಣು, ಹೂವು ಕೂಡ ಎಸೆಯಲಾಗಿದೆ.  ಈ ಮೂಲಕ ಮತದಾರರು ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸಲಿ, ತಮ್ಮ ಅಭ್ಯರ್ಥಿಯೇ ಗೆಲ್ಲಲಿ ಎಂದು ವಾಮಾಚಾರದ ಮೂಲಕ ಮುಂದಾಗಿದ್ದಾರೆ.  ಈ ಮೂಲಕ ಇದೀಗ ಓತಿಘಟ್ಟದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಕರೋನಾ ಲಸಿಕೆ ಬಂದಿರುವುದು ಸಂತೋಷ : ಯು.ಟಿ.ಖಾದರ್

ಬೆಂಗಳೂರು: ಕೊರೋನಾ ಲಸಿಕೆ ವಿತರಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಮೊದಲು ಗ್ರೂಪ್ ಡಿ ನೌಕರರ ಮೇಲೆ ಯಾಕೆ ಪ್ರಯೋಗ ಮಾಡಬೇಕು....

‘ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆ’

ಕಲಬುರಗಿ: ಕಲಬುರಗಿಯಲ್ಲಿ ನಗರದ ಜಿಮ್ಸ್ ಕಾಲೇಜಿನಲ್ಲಿ ಸಂಸದ ಉಮೇಶ್ ಜಾಧವ್ ಕೊವಿಡ್ ವ್ಯಾಕ್ಸಿನ್ ಗೆ ಚಾಲನೆ ನೀಡಿದರು. ಜಿಲ್ಲೆಯ 8 ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಗೆ ಚಾಲನೆ ನೀಡಲಾಯಿತು. ಒಂದು ಕೇಂದ್ರದಲ್ಲಿ 100...

‘ಡಿ ಗ್ರೂಪ್‌ ನೌಕರ ಚಂದ್ರಶೇಖರ್‌ಗೆ ಮೊದಲ ಲಸಿಕೆ ವಿತರಣೆ’

ಬೆಂಗಳೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಅಟೆಂಡರ್ ನಾಗರತ್ನಾಗೆ ಲಸಿಕೆ ನೀಡಿ  ಹೂ ಗುಚ್ಛ ನೀಡಿ ಅಭಿನಂದಿಸಿದರು. ಜೊತೆ ಆರೋಗ್ಯ...

‘ಲಸಿಕೆ ವಿತರಣೆಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ’

ಬೆಂಗಳೂರು: ಜಗತ್ತಿನ ಅತಿ ದೊಡ್ಡ ಕೊವಿಡ್ ಲಸಿಕೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು. ಅತಿ ಕಡಿಮೆ ದಿನದಲ್ಲಿ ಮಹಾಮಾರಿ ಕೊರೋನಾ ಗೆ ವಿಜ್ಞಾನಿಗಳು ಎರಡು ಲಸಿಕೆಯನ್ನು ಸಿದ್ಧ ಪಡಿಸಿದ್ದಾರೆ....

Recent Comments