Saturday, May 28, 2022
Powertv Logo
Homeರಾಜ್ಯಎಣ್ಣೆ ಮತ್ತಲ್ಲಿ ಹಾವಿಗೆ ಮುತ್ತು ಕೊಟ್ಟ ಭೂಪ!

ಎಣ್ಣೆ ಮತ್ತಲ್ಲಿ ಹಾವಿಗೆ ಮುತ್ತು ಕೊಟ್ಟ ಭೂಪ!

ಶಿವಮೊಗ್ಗ: ಹಾವಿಗೆ ಮುತ್ತು ಕೊಡಲು ಹೋಗಿದ್ದ ವ್ಯಕ್ತಿಯೋರ್ವ ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರಿರುವ ಘಟನೆ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ.

ಹೊಸಮನೆ ಬಡಾವಣೆಯಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿದ್ದು, ಈ ವೇಳೆ ಸ್ಥಳೀಯರು ತಮ್ಮಣ್ಣ ಕ್ಯಾಂಪ್​ನ ಸೋನು ಎಂಬಾತನನ್ನು ಹಾವು ಹಿಡಿಯಲು ಕರೆಸಿದ್ದರು. ಪಾನಮತ್ತನಾಗಿ ಆಗಮಿಸಿದ್ದ ಸೋನು, ಹಾವು ಹಿಡಿಯುವಾಗ ಗಿಮಿಕ್ ಮಾಡಲು ಹೋಗಿ ಹಾವಿಗೆ ಮುತ್ತು ಕೊಡಲು ಮುಂದಾಗಿದ್ದಾನೆ. ಇದರಿಂದ ರೊಚ್ಚಿಗೆದ್ದ ಹಾವು, ಬುಸುಗುಡುತ್ತಾ ಆತನ ತುಟಿಗೆ ಕಚ್ಚಿದೆ. ಹಾವು ಕೆಲವು ಕ್ಷಣ ತುಟ್ಟಿ ಕಚ್ಚಿ ಹಿಡಿದು ನಂತರ ಬಿಟ್ಟಿದೆ. ಹಾವು ಕಚ್ಚಿದ ತಕ್ಷಣ ಸೋನುವಿನ ತುಟಿಯಿಂದ ರಕ್ತ ಬಂದಿದೆ. ತಕ್ಷಣ ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

13 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments