ಅತೀ ಪುಟ್ಟ ಶಿವಲಿಂಗಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗರಿ..!

0
160

ಅಕ್ಕಸಾಲಿಗನೊಬ್ಬರ ಕೈಯಲ್ಲಿ ಚಿತ್ತಾರಗೊಂಡ ಚಿತ್ತಾರಕ್ಕೆ ಇದೀಗ ದಾಖಲೆಯ ಕಿರೀಟ ಒದಗಿ ಬಂದಿದೆ. ಅಪರೂಪದಲ್ಲಿ ಅಪರೂಪದ, ಚಿನ್ನದಲ್ಲಿ ಅರಳಿದ ಕಲಾ ಕೌಶಲ್ಯಕ್ಕೆ ತಕ್ಕೆ ಬೆಲೆ ದಕ್ಕಿದೆ. ತನ್ನೊಳಗಿನ ಕಲಾಕೌಶಲ್ಯವನ್ನ ಅರಳಿಸಿದ ಶಿವಮೊಗ್ಗದ ಸಚಿನ್ ಎಂಬ ಯುವಕನಿಗೆ ಇದೀಗ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನ ಗರಿ ಮೂಡಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಚಿನ್ ಎಂಬ ಈ ಯುವಕ, ಮೂಲತಃ ಚಿನ್ನಬೆಳ್ಳಿ ಕೆಲಸ ಮಾಡುವವರು. ಅವರು ರಚಿಸಿರುವ ಈ ಸಣ್ಣದರಲ್ಲಿಯೇ ಅತೀ ಸಣ್ಣ ಶಿವಲಿಂಗ ರಚಿಸಿದ್ದಾರೆ. ಆ ಶಿವಲಿಂಗ ಕೇವಲ 0.6 ಮಿಲಿ ಮೀಟರ್ ಎತ್ತರವಿದೆ. ಅದರಲ್ಲೂ ಶಿವಲಿಂಗ ಚಿನ್ನದ್ದು. ಈ ಶಿವಲಿಂಗ ಕೇವಲ 0.112 ಮಿಲಿ ಗ್ರಾಂ ಚಿನ್ನ ಬಳಸಿ ರಚಿಸಲ್ಪಟ್ಟಿದೆ. ಈ ಒಂದು ಅಪರೂಪದ, ರಾಜ್ಯದಲ್ಲಿ ಪ್ರಪ್ರಥಮ ಅತಿ ಸಣ್ಣದರಲ್ಲಿಯೇ ಸಣ್ಣ, ಅತಿ ಸಣ್ಣ ಶಿವಲಿಂಗಕ್ಕೆ ಇದೀಗ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನ ಗರಿ ದಕ್ಕಿದೆ.

ಕಳೆದ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ, ಈ ಮೈಕ್ರೋ ಶಿವಲಿಂಗವನ್ನು ಬಂಗಾರದಲ್ಲಿ ರಚಿಸಿ, ಭಕ್ತಿ ಮೆರೆದಿದ್ದು, ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದ ಸಚಿನ್ ಗೆ ಈಗ ಈ ಅವಾರ್ಡ್ ಸಂಧಿರುವುದು ಮತ್ತೊಮ್ಮೆ ಭದ್ರಾವತಿ ನಗರದ ಜನರು ಮತ್ತು ಅವರ ಸ್ನೇಹಿತರಿಂದ, ಶಹಬ್ಬಾಶ್​ಗಿರಿ ಸಿಗುತ್ತಿದೆ. ಅಲ್ಲದೇ, ಈ ಇಂಡಿಯನ್ ಬುಕ್ ರೆಕಾರ್ಡ್ಸ್ ನ ದಾಖಲೆಯ ಪ್ರಶಸ್ತಿ ಪತ್ರ ಮತ್ತು ಪದಕವನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರಿಂದ ಪಡೆಯಬೇಕೆಂಬ ಆಶಾಭಾವನೆ ಹೊಂದಿರುವ ಸಚಿನ್, ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊರಟು ನಿಂತಿದ್ದಾರೆ.

ಮೈಕ್ರೋ ಆರ್ಟ್ ಮೂಲಕ ರಚಿಸಲಾಗಿರುವ ಈ ಬಂಗಾರದ ಶಿವಲಿಂಗ, ನೋಡಲು ಬಹಳ ಆಕರ್ಷಕವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಬಂಗಾರದ ಕುಸುರಿ ಕೆಲಸ ಮಾಡುವ ಸಚಿನ್ ಇದೀಗ, ಈ ಕಲಾಕೃತಿ ಮೂಲಕ ಮನೆ ಮಾತಾಗಿದೆ. ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಮೂಲಕ ಮತ್ತಷ್ಟು ಮನೆ ಮಾತಾಗಿದ್ದಾರೆ. ಇನ್ನು, ಈ ಸಚಿನ್, ಸಣ್ಣದರಲ್ಲಿ ಸಣ್ಣ, ಅತಿ ಸಣ್ಣ ರಾಮ ಮಂದಿರವನ್ನು ಸಿದ್ಧ ಪಡಿಸಿ, ಎಲ್ಲರು ಹುಬ್ಬೇರುವಂತೆ, ಮಾಡಿದ್ದಾರೆ. ಈ ರಾಮ ಮಂದಿರ ಕೇವಲ 18 ಗ್ರಾಂ ಚಿನ್ನದಲ್ಲಿ ರಚಿಸಲಾಗಿದ್ದು, ಒಂದು ಸಣ್ಣ ಬೆಂಕಿ ಪಟ್ಟಣದಷ್ಟು ಗಾತ್ರದಲ್ಲಿ ಈ ರಾಮ ಮಂದಿರ ಕಾಣುತ್ತದೆ. ಕೇವಲ ಒಂದುಮುಕ್ಕಾಲು ಇಂಚಿ ಎತ್ತರವಿದೆ, ಎರಡು ಮುಕ್ಕಾಲೂ ಇಂಚಿ ಉದ್ದವಿದೆ. ಈ ರಾಮ ಮಂದಿರ ನಿರ್ಮಾಣ ಮಾಡಲು ಈ ಯುವಕ ಸಚಿನ್ ಬರೊಬ್ಬರಿ 45 ದಿನಗಳನ್ನು ತೆಗೆದುಕೊಂಡಿದ್ದಾರೆ. ಇದು ಕೂಡ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗುವ ಕನಸು ಕಾಣುತ್ತಿದ್ದಾರೆ. ಈ ಒಂದು ಅಪರೂಪದ, ರಾಮ ಮಂದಿರ ರಚಿಸಿರುವ ಬಗ್ಗೆ ಮತ್ತು ಮೈಕ್ರೋ ಶಿವಲಿಂಗ ರಚಿಸಿರುವ ಸಚಿನ್ ಅವರ ಸಾಧನೆ ಮತ್ತು ವಿಭಿನ್ನ ಚಿಂತನೆಗೆ ಇವರ ಸ್ನೇಹಿತರು, ಬಂಗಾರದ ಕಲಾವಿದ ಸಚಿನ್ ರನ್ನ ಹಾಡಿ ಹೊಗಳುತ್ತಿದ್ದಾರೆ. ಮೈಕ್ರೋ ಕಲಾಕೃತಿಗಳನ್ನು ನಿರ್ಮಿಸಿ, ದಾಖಲೆಯ ಬಗ್ಗೆ ಕಾಣುತ್ತಿದ್ದ ಕನಸು ಇದೀಗ ನನಸಾಗಿದೆ. ಈ ಬಂಗಾರದ ಕಲಾಕಾರನ ಕಲಾಕುಂಚದಲ್ಲಿ, ಮತ್ತಷ್ಟು ಚಿನ್ನ-ಬೆಳ್ಳಿಯ ಕಲಾಪ್ರಕಾರಗಳು ಹೊರಬರಲಿ

LEAVE A REPLY

Please enter your comment!
Please enter your name here