Home ರಾಜ್ಯ ಇತರೆ ಪೊಲೀಸರನ್ನೇ ಠಾಣೆಯಿಂದ ಓಡಿಸಿದ ನಾಗರಾಜ..!

ಪೊಲೀಸರನ್ನೇ ಠಾಣೆಯಿಂದ ಓಡಿಸಿದ ನಾಗರಾಜ..!

ಪೊಲೀಸ್ ಸ್ಟೇಷನ್ ನಿಂದಲೇ ನಾಗರಾಜ ಪೊಲೀಸರನ್ನು ಓಡಿಸಿದ್ದಾನೆ..! ನಾಗರಾಜ ಎಂಟ್ರಿ ಕೊಡ್ತಿದ್ದಂತೆ ಪೊಲೀಸ್ರು ಕಕ್ಕಾಬಿಕ್ಕಿಯಾಗಿ ಠಾಣೆಯಿಂದ ಹೊರಬಂದಿದ್ದಾರೆ..!
ನಾಗರಾಜ ಅಂದ್ರೆ ಯಾರೋ ದೊಡ್ಡ ರೌಡಿ ಅಲ್ಲ, ಯಾರೋ ರೌಡಿ ಆಗಿದ್ದಿದ್ರೆ ಪೊಲೀಸ್ರು ಹೆಡೆಮುರಿ ಕಟ್ಟುತ್ತಿದ್ರು. ಆದ್ರೆ, ಪೊಲೀಸ್ ಸ್ಟೇಷನ್ ಗೆ ನುಗ್ಗಿದ್ದು ಹೆಡೆ ಬಿಚ್ಚೋ ನಾಗ..!


ಹೌದು, ನಾಗರಾಜ ನುಗ್ಗಿದ್ದು ಶಿವಮೊಗ್ಗದ ವಿದ್ಯಾನಗರ ಸಂಚಾರಿ ಪೂರ್ವ ಪೊಲೀಸ್ ಸ್ಟೇಷನ್ ಗೆ. ಪೊಲೀಸ್ರೆಲ್ಲಾ ದೀಪಾವಳಿ ಹಬ್ಬದ ಮೂಡಲ್ಲಿದ್ರು. ಮನೇಲಿ ಹೆಂಡ್ತಿ, ಮಕ್ಕಳ ಜೊತೆ ಆರಾಮಾಗಿ ಹಬ್ಬವನ್ನು ಆಚರಿಸೋಣ ಅಂದ್ರೆ ರಜೆ ಬೇಕಲ್ಲ..? ಹಬ್ಬ ಆಗಿದ್ರೂ ರಜೆ ಇಲ್ದೆ ಡ್ಯುಟಿ ಮೇಲೆ ಠಾಣೆಯಲ್ಲಿದ್ರು. ಹೀಗಿರುವಾಗ ನಾಗರಹಾವೊಂದು ಠಾಣೆಯಲ್ಲಿ ಪ್ರತ್ಯಕ್ಷವಾಗಿ ಎಲ್ಲಾ ಪೊಲೀಸ್ರನ್ನೂ ಕಕ್ಕಾಬಿಕ್ಕಿಗೊಳಿಸಿತು. ಹಾವನ್ನು ಕಂಡಿದ್ದೇ ತಡ ಪೊಲೀಸ್ರು ಎದ್ನೋ ಬಿದ್ನೋ ಅಂತ ಠಾಣೆಯಿಂದ ಹೊರಬಂದ್ರು. ನಂತ್ರ ಉರಗ ತಜ್ಞ ಸ್ನೇಕ್ ಕಿರಣ್ ಅವ್ರನ್ನು ಕರೆಸಿದ್ರು. ಠಾಣೆಗೆ ಬಂದ ಸ್ನೇಕ್ ಕಿರಣ್ ಅವ್ರು ರೆಕಾರ್ಡ್ ರೂಮ್ ನ ಬೀರುವಿನಲ್ಲಿದ್ದ ನಾಗರಾಜನನ್ನು ಹಿಡಿದು, ಅರಣ್ಯ ಇಲಾಖೆ ಸಹಕಾರದಿಂದ ಕಾಡಿಗೆ ಬಿಡೋ ಕೆಲಸ ಮಾಡಿದ್ರು. ಈ ನಾಗರಾಜ ಸುಮಾರು 4.5 ಅಡಿ ಉದ್ದ ಇದ್ನಂತೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments