ಶಿವಮೊಗ್ಗ ‘ಲೋಕ’ಕಣದಲ್ಲಿ 14 ರಣಕಲಿಗಳು..!

0
93

ಶಿವಮೊಗ್ಗ : ರಾಜ್ಯದಲ್ಲಿ ಏಪ್ರಿಲ್ 18 ಮತ್ತು 23ರಂದು ಎರಡು ಹಂತದಲ್ಲಿ ಲೋಕ ಸಮರ ನಡೆಯಲಿದೆ. 23ರಂದು ಮತದಾನ ನಡೆಯುವ ಕ್ಷೇತ್ರಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಕೂಡ ಒಂದು.
ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿತ್ತು. ಇಂದು ಇಬ್ಬರು ಅಭ್ಯರ್ಥಿಗಳಿಂದ ಒಟ್ಟು 3 ನಾಮಪತ್ರ ಸಲ್ಲಿಕೆಯಾಗಿದೆ. ಮಾರ್ಚ್ 28 ರಿಂದ ಇಂದಿನವರೆಗೆ ಒಟ್ಟು 14 ಅಭ್ಯರ್ಥಿಗಳು ಒಟ್ಟು 26 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ, ಜನತಾದಳದ ಅಭ್ಯರ್ಥಿ ಎಸ್. ಮಧು ಬಂಗಾರಪ್ಪ ಮತ್ತು ರಿಪಬ್ಲಿಕನ್ ಸೇನಾ ಪಕ್ಷದ ಅಭ್ಯರ್ಥಿ ಗುಡ್ಡಪ್ಪ ತಲಾ 4 ನಾಮಪತ್ರಗಳನ್ನು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು 3 ನಾಮಪತ್ರಗಳನ್ನು, ಪಕ್ಷೇತರ ಅಭ್ಯರ್ಥಿಗಳಾದ ಶೇಖರ್​ ನಾಯ್ಕ್​​​ ಬಿನ್ ರಾಮಚಂದ್ರ ನಾಯ್ಕ್, ಎಸ್.ಉಮೇಶಪ್ಪ, ಶಶಿಕುಮಾರ್ ಬಿ.ಕೆ. ಮತ್ತು ಉಮೇಶ ವರ್ಮಾ ತಲಾ 2 ನಾಮಪತ್ರಗಳನ್ನು ಹಾಗೂ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿ ಕೆ. ಕೃಷ್ಣ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಗುಡ್ಡಪ್ಪ, ಪಕ್ಷೇತರ ಅಭ್ಯರ್ಥಿ ಮಹ್ಮದ್ ಯೂಸೂಫ್ ಖಾನ್, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ವೆಂಕಟೇಶ್ ಆರ್ ಮತ್ತು ವೈ.ಡಿ.ಸತೀಶ್, ಪಕ್ಷೇತರ ಅಭ್ಯರ್ಥಿಗಳಾದ ವಿನಯ್ ಕೆ.ಸಿ. ಮತ್ತು ಕೆ.ಶಿವಲಿಂಗಪ್ಪ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರಗಳ ಪರಿಶೀಲನೆ ಏಪ್ರಿಲ್ 5 ರಂದು ನಡೆಯಲಿದೆ, ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಏಪ್ರಿಲ್ 8 ಕೊನೆಯ ದಿನವಾಗಿದೆ. ಅಂದು ಮಧ್ಯಾಹ್ನ 3 ಗಂಟೆಯ ನಂತರ ಅಂತಿಮವಾಗಿ ಕಣದಲ್ಲಿ ಎಷ್ಟು ಜನರಿದ್ದಾರೆಂಬುದು ತಿಳಿಯಲಿದೆ. ಆ ಪಟ್ಟಿಯನ್ನೇ, ಅಂತಿಮವಾಗಿ ಚುನಾವಣಾಧಿಕಾರಿಗಳು, ಘೋಷಣೆ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here