Home ರಾಜ್ಯ ಮರಗಳನ್ನು ಕಡಿಯುವ ಬದಲು ಶಿಫ್ಟ್ ಮಾಡಿ ಮಾದರಿಯಾದ ಶಿವಮೊಗ್ಗ ಕೃಷಿ ವಿವಿ!

ಮರಗಳನ್ನು ಕಡಿಯುವ ಬದಲು ಶಿಫ್ಟ್ ಮಾಡಿ ಮಾದರಿಯಾದ ಶಿವಮೊಗ್ಗ ಕೃಷಿ ವಿವಿ!

ಶಿವಮೊಗ್ಗ : ಜೆಸಿಬಿ ಯಂತ್ರ ಮತ್ತು ಕ್ರೇನ್ ಬಳಸಿ ಮರಗಳನ್ನು ಶಿಫ್ಟ್ ಮಾಡುವ ಮೂಲಕ ಶಿವಮೊಗ್ಗದ ಕೃಷಿ ವಿಶ್ವವಿದ್ಯಾನಿಲಯ ಮಾದರಿಯಾಗಿದೆ.

ವಿದೇಶಗಳಲ್ಲಿ ಮರಗಳ ಮಾರಣಹೋಮದ ಬದಲು ಪರಿಸರ ಉಳಿಸುವ ನಿಟ್ಟಿನಲ್ಲಿ ದೊಡ್ಡ ದೊಡ್ಡ ಮರಗಳನ್ನೇ ವಿಶೇಷ ಯಂತ್ರಗಳನ್ನ ಬಳಸಿ,  ಬೇರೆಡೆಗೆ ಸ್ಥಳಾಂತರಿಸುತ್ತಾರೆ. ಇದಕ್ಕಾಗಿಯೇ ವಿಶೇಷ ಯಂತ್ರಗಳನ್ನು ಅಲ್ಲಿ ಬಳಸಲಾಗುತ್ತದೆ. ಆದರೆ, ಶಿವಮೊಗ್ಗದ ಸಾಗರ ಬಳಿಯ ಆನಂದಪುರಂನ ಇರುವಕ್ಕಿ ಗ್ರಾಮದಲ್ಲಿರುವ, ಕೃಷಿ ವಿವಿ ಆವರಣದಲ್ಲಿರುವ ಬೀಟೆ ಮರಗಳನ್ನ ಅಂತಹ ವಿಶೇಷ ಯಂತ್ರವಿಲ್ಲದೆ ಶಿಫ್ಟ್​ ಮಾಡಲಾಗಿದೆ!  ಅರಣ್ಯ ಇಲಾಖೆ ಅನುಮತಿ ಪಡೆದ ಬಳಿಕ   ಕೇವಲ ಕ್ರೇನ್ ಮತ್ತು ಜೆಸಿಬಿ ಬಳಸಿ ವಿಶ್ವವಿದ್ಯಾನಿಲಯದ ಆವರಣದಲ್ಲಿದ್ದ ಮರವನ್ನು ಸ್ಥಳಾಂತರಿಸಲಾಗಿದೆ.

ಇದೀಗ ಕೃಷಿ ವಿವಿ ವಿಸ್ತೀರ್ಣವಾಗುತ್ತಿದ್ದು, ಅದಕ್ಕಾಗಿ ಜಾಗದ ಅವಶ್ಯಕತೆ ಇತ್ತು. ಈ ಕಾರಣದಿಂದ ಆವರಣದಲ್ಲಿದ್ದ   ಸುಮಾರು 50 ಮರಗಳನ್ನು ಕಡಿಯಬೇಕಾಗಿತ್ತು. ಆದ್ರೆ ಈಗ ಇವೆಲ್ಲವೂ ಬೇರೆ ಪ್ರದೇಶಕ್ಕೆ ಶಿಫ್ಟ್​ ಆಗಿದೆ.  ಈ ಮೂಲಕ ವಿವಿ ಪರಿಸರ ಕಾಳಜಿ ಮೆರೆದಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments