ರಾಹುಲ್​ -ಅನುಷ್ಕಾ ವಿರುದ್ಧ ಕಮೆಂಟ್ ಮಾಡಿದವನಿಗೆ ಜಾಡಿಸಿದ ಜಾಕ್ಸನ್..!

0
903

ಸೋಶಿಯಲ್ ಮೀಡಿಯಾದಲ್ಲಿ ಒಂದಿಷ್ಟು ಮಂದಿ ಇರ್ತಾರೆ…ತಾವು ಏನ್ ಪೋಸ್ಟ್ ಮಾಡ್ತಿದ್ದೀವಿ, ತಾವೇನು ಕಮೆಂಟ್ ಮಾಡ್ತಿದ್ದೀವಿ ಅನ್ನೋ ಪರಿಜ್ಞಾನ ಇರಲ್ಲ. ಒಟ್ರಾಶಿ ಮನಬಂದಂತೆ ಗೀಚೋರೇ ಹೆಚ್ಚು..! ಹೀಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ವಿರುದ್ಧ ನೆಟ್ಟಿಗನೊಬ್ಬ ಕಮೆಂಟ್ ಮಾಡಿದ್ದು, ಆ ಕಮೆಂಟ್​ಗೆ ಸೌರಾಷ್ಟ್ರ ಬ್ಯಾಟ್ಸ್​ಮನ್ ಶೆಲ್ಡನ್ ಜಾಕ್ಸನ್ ಜಾಡಿಸಿದ್ದಾರೆ..!
ರಣಜಿ ಟ್ರೋಫಿ ಫೈನಲ್​ನಲ್ಲಿ ಆಡಿದ್ರೂ ಕೂಡ ಸೌರಾಷ್ಟ್ರದ ಯಾವ್ದೇ ಆಟಗಾರನನ್ನು ಭಾರತ ಎ ಸೀರಿಸ್​ಗೆ ಆಯ್ಕೆ ಮಾಡ್ಲಿಲ್ಲ ಯಾಕೆ ಅಂತ ಬಿಸಿಸಿಐಯನ್ನು ಪ್ರಶ್ನಿಸಿ ಜಾಕ್ಸನ್ ಟ್ವೀಟ್ ಮಾಡಿದ್ರು. ಅಷ್ಟೇ ಅಲ್ದೆ ರಣಜಿಯಲ್ಲಿ ಸ್ಕೋರ್ ಮಾಡಿರೋ, ವಿಕೆಟ್​ ಪಡೆದವರ ಪಟ್ಟಿಯನ್ನು ಟ್ವಿಟರ್​ನಲ್ಲಿ ಶೇರ್ ಮಾಡಿ. ಆಯ್ಕೆಗೆ ಸೌರಾಷ್ಟ್ರ ಆಟಗಾರರತ್ತವೂ ಗಮನ ಹರಿಸುವಂತೆ ಹೇಳಿದ್ದರು.
ಈ ಟ್ವೀಟ್​ ಗೆ ಕಮೆಂಟ್ ಮಾಡಿದ್ದ ಸೂರ್ಯ ಅಡ್ವೋಕೇಟ್ ಎಂಬಾತ ‘ನೀವು ಕೆ.ಎಲ್ ರಾಹುಲ್ ಅವರಂತೆ ಅನುಷ್ಕಾ ಶರ್ಮಾ ಜೊತೆ ಸ್ನೇಹ ಬೆಳೆಸಿ ಅಂತ ಕಮೆಂಟ್ ಮಾಡಿದ್ದಾನೆ.. ಈ ಕಮೆಂಟ್​ ನೋಡಿದ ಜಾಕ್ಸನ್, ” ಸೂರ್ಯ, ನೀವು ವರ್ತಿಸುವುದನ್ನು ಮೊದಲು ಕಲಿಯಿರಿ. ಏನೇನೋ ಟ್ವೀಟ್ ಮಾಡೋದಲ್ಲ.. ಯೋಚ್ನೆ ಮಾಡಿ. ನಿಮ್ಮ ಟ್ವೀಟ್ ಸಂಬಂಧವೇ ಇಲ್ಲದ ಅನುಷ್ಕಾ ಮತ್ತು ರಾಹುಲ್​ಗೆ ಅಪಮಾನ ಮಾಡುವಂತಿದೆ. ಕ್ರಿಕೆಟ್ ವಿಷ್ಯಾದಲ್ಲಿ ಫ್ಯಾಮಿಲಿಯನ್ನು ತರ್ಬೇಡಿ” ಅಂತ ಬುದ್ಧಿಮಾತು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here